11 ದೇವದೂತಂಗ ಶಕ್ತಿ ಉಳ್ಳಯಿಂಗಳಾಯಿತ್ ಇಂಜತೇಂಗಿಯು, ಅದಿಕಾರ ಉಳ್ಳಯಿಂಗಳಾಯಿತ್ ಇಂಜತೇಂಗಿಯು, ದೇವಡ ಸನ್ನಿದಾನತ್‍ಲ್ ಅಯಿಂಗಳ ದೂಷಣೆ ಮಾಡ್‌ಲೆಲ್ಲ!
ಬೋಂಡತಾಸೆ, ಎಲ್ಲಾ ಕೆಟ್ಟ ಕೆಲಸ, ಮೋಸ, ಅಯೋಗ್ಯತನ, ಒಟ್ಟೆಕಿಚ್ಚ್, ಬೈಗಳ, ಹಮ್ಮ್, ಬುದ್ದಿ ಕೆಟ್ಟ ಗುಣ ಎಲ್ಲಾ ಮನುಷ್ಯಂಗಡ ಹೃದಯತ್ಂಜೆ ಬಪ್ಪ.
ಅಂವೊಂಗಾಯಿತ್ ಕಷ್ಟಪಟ್ಟಂಡ್ ಉಳ್ಳ ನಿಂಗಕ್, ನಂಗಡ ಕೂಡೆ ಆರಾಮ್ ತಪ್ಪ. ದೇವ ದಾರ್‍ೕಂದ್ ಗೊತ್ತಿಲ್ಲತಯಿಂಗಕ್ ಪಿಂಞ ನಂಗಡ ಒಡೆಯನಾನ ಯೇಸು ಕ್ರಿಸ್ತಂಡ ನಲ್ಲ ಸುದ್ದಿಕ್ ತಗ್ಗ್‌ಚಿಡತಯಿಂಗಕ್ ನ್ಯಾಯವಾನ ತೀರ್ಪ್ ತಪ್ಪ. ಆ ತೀರ್ಪ್‌ನ, ಒಡೆಯನಾನ ಯೇಸು ತಾಂಡ ಮಾಹಾ ಶಕ್ತಿರ ದೂತಂಗಡ ಕೂಡೆ, ಕತ್ತಿಯಂಡ್ ಇಪ್ಪ ತಿತ್ತ್‌ಲ್, ಪರಲೋಕತ್ಂಜ ಅಂವೊನ ಕಾಂಬ್‌ಚಿಡ್‌ವಕ ಮಾಡ್‌ವ.
ಆಚೇಂಗಿ ಮಹಾ ದೇವದೂತನಾನ ಮಿಕಾಯೇಲ ಮೋಶೇರ ಚಾವ್ ತಡೀರ ವಿಷಯತ್‍ಲ್ ತರ್ಕ ಮಾಡ್‌ವಕಾಪಕ, ಸೈತಾನನ ದೂಷಣೆ ಮಾಡತೆ, ಒಡೆಯ ನಿನ್ನ ಗದರಿಚಿಡಡ್‍ೕಂದ್ ಎಣ್ಣ್‌ಚಿ.