ನಾನೇ ಪರಲೋಕತ್ಂಜ ಬಂದ ಜೀವತ್‍ರ ಒಟ್ಟಿ; ಈ ಒಟ್ಟಿನ ತಿಂಬಯಿಂಗ ಎಕ್ಕಾಲು ಬದ್‍ಕ್‍ವ; ನಾನ್ ತಪ್ಪ ಒಟ್ಟಿ ನಾಡ ತಡಿಯೇ. ಈ ಲೋಕತ್‍ರ ಜನ ನಿತ್ಯ ಜೀವ ಪಡೆಯುವಕಾಯಿತ್ ನಾನ್ ನಾಡ ತಡೀನ ತಪ್ಪೀಂದ್ ಎಣ್ಣ್‌ಚಿ.
ಆಚೇಂಗಿ ಇಕ್ಕ ಪ್ರವಾದಿಯಂಗ ಒಳ್‍ದಿ ಬೆಚ್ಚಿತುಳ್ಳ ಮೂಲಕವು, ನಿತ್ಯವಾನ ದೇವ ಹುಕುಮ್ ಕೊಡ್‍ತನೆಕೆ, ಎಲ್ಲಾ ಯೆಹೂದ್ಯರಲ್ಲತಯಿಂಗಳು ಅಂವೊಂಡ ಮೇಲೆ ನಂಬಿಕೆ ಬೆಚ್ಚಿತ್ ಅಂವೊಂಗ್ ತಗ್ಗಿತ್ ನಡ್‍ಪನೆಕೆ, ಈ ಸುದ್ದಿ ಯೆಹೂದ್ಯ ಅಲ್ಲತ ಎಲ್ಲಾ ಜನತ್‍ರ ಗುಂಪ್‌ಕು ಗೊತ್ತ್ ಮಾಡ್‍ಚಿ.
ನೇರಾನ ಪ್ರೀತಿ ಎಂತ ಎಣ್ಣ್‌ಚೇಂಗಿ, ನಂಗ ದೇವಡ ಮೇಲೆ ಬೆಚ್ಚ ಪ್ರೀತಿ ಅಲ್ಲ, ದೇವ ನಂಗಡ ಮೇಲೆ ಬೆಚ್ಚ ಪ್ರೀತಿಯೇ. ಅದ್, ನಂಗಡ ಪಾಪತ್‍ನ ಪರಿಹಾರ ಮಾಡ್‌ವಕ್ ದೇವ ತಾಂಡ ಒರೇ ಮೋಂವೊನ ಈ ಲೋಕಕ್ ಅಯಿಚದ್.