10 ಅನ್ನನೆ ಮಕೆದೋನ್ಯ ನಾಡ್‍ಲ್ ಉಳ್ಳ ಯೇಸುನ ನಂಬ್‍ನ ಅಣ್ಣತಮ್ಮಣಂಗಳ ನಿಂಗ ಪ್ರೀತಿ ಮಾಡಿಯಂಡ್ ಉಳ್ಳಿರ. ಆಚೇಂಗಿ, ನಿಂಗ ಇಂಞು ಪ್ರೀತಿಲ್ ಬೊಳಿಯಂಡೂಂದ್ ನಂಗ ನಿಂಗಳ ಬೋಡುವ.
ಯೆರೂಸಲೇಮ್‍ಲ್ ಗರೀಬಂಗಳಾನ ದೇವಡ ಮಕ್ಕಕ್ ಚೆನ್ನ ಪಣ ಸಹಾಯ ಮಾಡ್‌ವಕ್ ಮಕೆದೋನ್ಯ ಪಿಂಞ ಅಖಾಯ ಪಟ್ಟಣತ್‍ಲ್ ಉಳ್ಳಯಿಂಗ ಮನಸುಳ್ಳಯಿಂಗಳಾಯಿತುಂಡ್.
ಇದ್ಂಗಾಯಿತ್, ಒಡೆಯನಾನ ಯೇಸುರಲ್ಲಿ ನಿಂಗ ಬೆಚ್ಚಿತುಳ್ಳ ನಂಬಿಕೆ ಪಿಂಞ ದೇವಡ ಮಕ್ಕಡ ಮೇಲೆ ಬೆಚ್ಚಿತುಳ್ಳ ಪ್ರೀತಿನ ನಾನ್ ಕ್‍ೕಟ ದಿವಸತ್ಂಜ,
ನಿಂಗಡ ಪ್ರೀತಿ ಇಂಞು ದುಂಬ ದುಂಬಿತ್ ದೇವಡ ವಿಷಯತ್‍ಲ್ ನೇರಾನ ಬುದ್ದಿಲ್, ಶುದ್ದವಾನ ಜ್ಞಾನತ್‍ಲ್ ನಿಂಗ ಬೊಳ್ಂದಂಡ್ ಬರಂಡೂಂದ್ ನಾನ್ ನಿಂಗಕಾಯಿತ್ ದೇವಡ ಪಕ್ಕ ಪ್ರಾರ್ಥನೆ ಮಾಡಿಯುಂಡುಳ್ಳ.
ಎನ್ನಂಗೆಣ್ಣ್‌ಚೇಂಗಿ, ಕ್ರಿಸ್ತ ಯೇಸುರಲ್ಲಿ ನಿಂಗಕ್ ಉಳ್ಳ ನಂಬಿಕೆ ಪಿಂಞ ದೇವಡ ಮಕ್ಕಡ ಮೇಲೆ ಉಳ್ಳ ನಿಂಗಡ ಪ್ರೀತಿನ ನಂಗ ಕ್‍ೕಟತ್.
ಇನ್ನನೆ ನಿಂಗ ಮಕೆದೋನ್ಯ ಪಟ್ಟಣತ್‍ಲ್ ಪಿಂಞ ಅಖಾಯ ಪ್ರಾಂತ್ಯತ್‍ಲ್ ಉಳ್ಳ ಯೇಸುನ ನಂಬ್‍ನಯಿಂಗಕ್ ಒರ್ ಉದಾರಣೆಯಾಯಿತುಳ್ಳಿರ.
ನಂಗ ನಿಂಗಡ ಮೇಲೆ ಬೆಚ್ಚಿತುಳ್ಳ ಪ್ರೀತಿರನೆಕೆ, ನಿಂಗ ಸಹ ಒಬ್ಬೊಬ್ಬಂಡ ಮೇಲೆ ಉಳ್ಳ ಪ್ರೀತಿಲ್ ಪಿಂಞ ಬೋರೆಯಿಂಗಡ ಮೇಲೆ ಬೆಚ್ಚಿತುಳ್ಳ ಪ್ರೀತಿಲ್ ದುಂಬಿತ್ ಇಂಞು ಬೊಳಿಯುವಕ್ ಒಡೆಯ ಸಹಾಯ ಮಾಡಡ್.
ನಂಗಡ ಅಣ್ಣತಮ್ಮಣಂಗಳೇ, ಆಕೀರಾಯಿತ್ ನಾನ್ ಎಣ್ಣ್‌ವದ್ ಎಂತ ಎಣ್ಣ್‌ಚೇಂಗಿ: ದೇವನ ಕುಶಿಪಡ್‌ತ್‌ವಕಾಯಿತ್ ನಿಂಗ ಎನ್ನನೆಯೆಲ್ಲಾ ಬದ್‍ಕಂಡೂಂದ್ ನಂಗ ಎಣ್ಣಿತಂದದ್‍ನ ನಿಂಗ ಸ್ವೀಕಾರ ಮಾಡ್‍ನನೆಕೆ, ಇಂಞು ಅದ್‍ಲ್ ದುಂಬ ಬೊಳಿಯುವಕ್ ಒಡೆಯನಾನ ಯೇಸುರಗುಂಡ್ ನಿಂಗಳ ಬೋಡಿತ್, ನಿಂಗಕ್ ಬುದ್ದಿ ಎಣ್ಣಿಯಂಡ್ ಉಂಡ್.
ನಂಗಡ ಅಣ್ಣತಮ್ಮಣಂಗಳೇ, ನಿಂಗಕಾಯಿತ್ ನಂಗ ಎಕ್ಕಾಲು ದೇವಕ್ ವಂದನೆ ಎಣ್ಣುವಕ್ ಜವಾಬ್ದಾರಂಗಳಾಯಿತ್ ಉಂಡ್; ನಿಂಗ ದೇವಡ ಮೇಲೆ ಬೆಚ್ಚಿತುಳ್ಳ ನಂಬಿಕೆ ಚಾಯಿತೆ ಬೊಳ್ಂದಂಡ್, ನಿಂಗ ಒಬ್ಬೊಬ್ಬಂಡ ಮೇಲೆ ಬೆಚ್ಚಿತುಳ್ಳ ಪ್ರೀತಿ ದುಂಬ ಜಾಸ್ತಿ ಆಯಂಡ್ ಉಳ್ಳಾಂಗ್, ನಂಗ ಅನ್ನನೆ ಎಣ್ಣ್‌ವದ್ ಸರಿಯಾಯಿತ್ ಉಂಡ್.
ನಂಗ ನಿಂಗಕ್ ಬೋದನೆ ಮಾಡ್‍ನನೆಕೆ, ನಿಂಗ ನಂಗಡ ಆಜ್ಞೆನ ಪಾಲ್ ಮಾಡಿಯಂಡ್ ಉಂಡ್, ಇಂಞು ಅನ್ನನೆ ಮಾಡ್‌ವಿರಾಂದ್ ನಂಗಕ್ ನಿಂಗಡ ಮೇಲೆ ನಂಬಿಕೇನ ದೇವ ತಂದಿಯತ್.
ನಂಗಡ ರಕ್ಷಕನು, ಒಡೆಯನು ಆನ ಯೇಸು ಕ್ರಿಸ್ತಂಡ ಕೃಪೇಲ್, ಅಂವೊನ ಗೊತ್ತ್ ಮಾಡ್‌ವ ವಿಷಯತ್‍ಲ್ ಬೊಳಿವಿರ. ಅಂವೊಂಗ್ ಇಕ್ಕಲು ಎಕ್ಕಲು ಮಹಿಮೆ ಬರಡ್. ಆಮೆನ್.