4 ನಂಗ ನಿಂಗಡ ಕೂಡೆ ಇಪ್ಪಕ, ಅಯಿಂಗ ನಂಗಳ ಹಿಂಸೆ ಮಾಡ್‌ವಾಂದ್ ನಿಂಗಕ್ ಎಣ್ಣಿಯಂಡಿಂಜತ್; ಅದ್ ಅನ್ನನೆ ಆಚೀಂದ್ ನಿಂಗಕ್ ಗೊತ್ತಾಚಿ.
ಆಚೇಂಗಿ, ನಾನ್ ಇದ್‍ನೆಲ್ಲ ಆಪಕ್ ಮಿಂಞಲೇ ಎಣ್ಣಿ ತಂದಿಯೆ.
ಅಯಿಂಗ ಅಂಫಿಪೊಲಿ ಪಿಂಞ ಅಪೊಲೋನ್ಯ ಎಣ್ಣ್‌ವ ಪಟ್ಟಣತ್‍ನ ದಾಟಿತ್ ಥೆಸಲೊನೀಕ ಪಟ್ಟಣಕ್ ಬಾತ್; ಅಲ್ಲಿ ಯೆಹೂದ್ಯಂಗಕ್ ಒರ್ ಸಬಾಮಂದಿರ ಇಂಜತ್.
ಪೌಲ ಬೆರೋಯತ್‍ಲ್ ದೇವಡ ವಾಕ್ಯತ್‍ನ ಎಣ್ಣಿಯಂಡುಂಡ್‍ೕಂದ್ ಥೆಸಲೊನೀಕತ್‍ರ ಯೆಹೂದ್ಯಂಗಕ್ ಗೊತ್ತಾಪಕ, ಅಯಿಂಗ ಅಲ್ಲಿಯು ಬಂತ್ ಜನಳ ಕೂಟಿತ್, ಕಲಹ ಮಾಡ್‍ಚಿ.
ಆಚೇಂಗಿ, ಇದ್‍ನೆಲ್ಲ ನೋಟಿತ್ ನಾಕ್ ಬೇಜಾರ್ ಆಪುಲೆ, ನಾಡ ಪ್ರಾಣತ್‍ನ ಸಹ ನಾನ್ ಬಲ್ಯದಾಯಿತ್ ಗೇನ ಮಾಡುಲೆ. ನಾಡ ಓಟತ್‍ನ ಕುಶೀಲ್ ಪೂರ್ತಿಮಾಡ್‌ವಕು, ಒಡೆಯನಾನ ಯೇಸು ನಾಕ್ ಒಪ್ಪ್‌ಚಿಟ್ಟ ದೇವಡ ಕೃಪೇರ ನಲ್ಲ ಸುದ್ದಿನ ಸಾಕ್ಷಿ ಕೊಡ್‍ಪದ್‍ನ ನೆರೆವೇರಿಚಿಡುವಕು ಮಾತ್ರ ನಾನ್ ಕುಶಿ ಪಡುವಿ.
ನಂಗಡ ಅಣ್ಣತಮ್ಮಣಂಗಳೇ, ಯೆಹೂದ್ಯ ಪ್ರಾಂತ್ಯತ್‍ಲ್ ಉಳ್ಳ ದೇವಡ ಸಬೇರನೆಕೆ ನಿಂಗಳು ಆಯಿತುಳ್ಳಿರ. ಯೆಹೂದ್ಯ ಸಬೆರ ಜನ ಎನ್ನನೆ ಯೇಸುನ ನಂಬತೆ ಅಯಿಂಗಡ ಸ್ವಂತ ಜನವಾಯಿತುಳ್ಳ ಯೆಹೂದ್ಯಂಗಡಗುಂಡ್ ಕಷ್ಟಪಟ್ಟತೋ ಅನ್ನನೆ ನಿಂಗಳು ಸಹ, ನಿಂಗಡ ಜನಾಂಗಡಗುಂಡ್ ಕಷ್ಟಪಟ್ಟಿರ.
ನಂಗ ಅಲ್ಲಿ ಬಪ್ಪಕ್ ಮಿಂಞ ಫಿಲಿಪ್ಪಿ ಪಟ್ಟಣತ್‍ಲ್ ನಂಗಳ ಜನ ಎನ್ನನೆ ತೊಂದರೆ ಮಾಡ್‍ಚೀಂದ್ ಪಿಂಞ ಎನ್ನನೆ ಮಾನಕೇಡಾಯಿತ್ ನಡ್‌ತ್‌ಚೀಂದ್ ನಿಂಗಕ್ ಗೊತ್ತುಂಡ್. ಆಚೇಂಗಿಯು, ದುಂಬ ವಿರೋದತ್‍ರ ಮದ್ಯತ್‍ಲ್ ದೇವಡ ನಲ್ಲ ಸುದ್ದಿನ ನಿಂಗಕ್ ಎಣ್ಣುವಕ್ ದೇವ ನಂಗಕ್ ಸಹಾಯ ಮಾಡ್‍ಚಿ.
ನಾನ್ ನಿಂಗಡ ಕೂಡೆ ಇಪ್ಪಕಾಪಕ, ನಿಂಗಕ್ ಈ ವಿಷಯ ಎಣ್ಣ್‌ನದ್ ನಿಂಗಕ್ ಗೇನ ಇಲ್ಲೆಯಾ?
ಒಬ್ಬಂಗ್ ಕೆಲಸ ಮಾಡ್‌ವಕ್ ಮನಸ್ಸ್ ಇಲ್ಲತಪೋಚೇಂಗಿ, ಅಂವೊ ಉಂಬಕ್ಕಾಗಾಂದ್ ನಂಗ ನಿಂಗಡ ಕೂಡೆ ಇಪ್ಪಕ್ ಸಹ ಈ ಕಾನೂನ್‌ನ ಎಣ್ಣಿ ತಂದಿಯೆ.