Biblia Todo Logo
Bìoball air-loidhne

- Sanasan -

ಜ್ಞಾನತ್‌ರ ಪಡಿಮ 9 - ಕೊಡವ ಬೈಬಲ್

1 ಜ್ಞಾನ ತಾಂಡ ಮನೆನ ಕೆಟ್ಟಿತ್, ತಾಂಡ ಏಳ್‌ ಕಂಬತ್‌ನ ಕೆತ್ತಿತ್‌ ಬೆಚ್ಚಿತುಂಡ್.

2 ಜ್ಞಾನ, ಯರ್ಚಿನ ಅಡಿಗೆ ಮಾಡಿತ್, ದ್ರಾಕ್ಷಿರಸತ್‌ನ ಕೂಟಿತ್, ಗದ್ದಾಳತ್‌ನ ತಯಾರ್‌ ಮಾಡ್‌ಚಿ.

3 ಜ್ಞಾನ ಎಲ್ಲಾರ್‌ನ ಕಾಕ್‌ಚಿಡುವಕಾಯಿತ್‌ ತಾಂಡ ಪಣಿಕಾರ್ತಿಯಳ ಅಯಿಚತ್. ಅಯಿಂಗ ಪಟ್ಟಣತ್‌ರ ಎತ್ತರವಾನ ಜಾಗತ್‌ ನಿಂದಂಡ್,

4 ಸಾದು ಮನುಷ್ಯಂಗಳ ನೋಟಿತ್: ಜ್ಞಾನತ್‌ರ ಮನೆಕ್‌ ಬಾರೀಂದ್‌ ಕಾಕಿಯಂಡುಂಡ್. ದಡ್ಡಂಗಳ ನೋಟಿತ್:

5 ಬಾರಿ, ಜ್ಞಾನ ತಯಾರ್‌ ಮಾಡ್‌ನ ಆಹಾರತ್‌ನ ಉಂಡಿತ್, ಅವ ತಯಾರ್‌ ಮಾಡ್‌ನ ದ್ರಾಕ್ಷಿರಸತ್‌ನ ಕುಡಿರಿ.

6 ಮೂಡಂಗಡ ಬಟ್ಟೆನ ಬುಡಿ, ಅಕ್ಕ ನಿಂಗ ಬದುಕುವಿರ. ಬುದ್ದಿರ ಬಟ್ಟೆಲ್‌ ನಡರಿ.

7 ಪರಿಹಾಸ ಮಾಡ್‌ವಂವೊನ ತಿದ್ದ್‌ವಂವೊಂಗ್‌ ಅವಮಾನ ಆಪ, ದುಷ್ಟನ ತಿದ್ದ್‌ವಂವೊಂಗ್‌ ಅಯಿಂಗಳ ಗಾಯ ಮಾಡುವ.

8 ಪರಿಹಾಸ ಮಾಡ್‌ವಂವೊನ ತಿದ್ದಂಡ, ಅಂವೊ ನಿನ್ನ ದ್ವೇಷ ಮಾಡುವ. ಜ್ಞಾನ ಉಳ್ಳಂವೊನ ತಿದ್ದ್‌ಚೇಂಗಿ, ಅಂವೊ ನಿನ್ನ ಪ್ರೀತಿ ಮಾಡುವ.

9 ಜ್ಞಾನ ಉಳ್ಳಂವೊಂಗ್‌ ಬುದ್ದಿ ಎಣ್ಣ್, ಅಂವೊ ಇಂಞು ಜ್ಞಾನಿ ಆಪ. ನೀತಿವಂತಂವೊಂಗ್‌ ಪಡಿಪ್‌ಚಿಡ್. ಅಂವೊ ಇಂಞು ಪಡಿಪ.

10 ಯೆಹೋವಂಗ್‌ ಬೊತ್ತಿತ್‌ ನಡ್‌ಪದೇ ಜ್ಞಾನತ್‌ರ ತೊಡಕ. ಪವಿತ್‌ರವಾನ ದೇವನ ಅರ್ಥಮಾಡುವದೇ ಬುದ್ದಿ.

11 ಜ್ಞಾನ ಆಯಿತುಳ್ಳ ನಾಡಗೊಂಡ್‌ ನೀನ್‌ ದುಂಬ ದಿವಸ ಬದ್‌ಕ್‌ವಿಯ. ನೀನ್‌ ಬದ್‌ಕ್‌ವ ಕಾಲ ಜಾಸ್ತಿ ಆಪ.

12 ನೀನ್‌ ಜ್ಞಾನಿಯಾಚೇಂಗಿ, ನೀಡ ಜ್ಞಾನ ನೀಕೆ ಲಾಬವಾಯಿತ್‌ಪ್ಪ. ನೀನ್‌ ಪರಿಹಾಸ ಮಾಡ್‌ವೊಂವೊನಾಚೇಂಗಿ, ನೀನೆ ಅದ್‌ಂಡ ಫಲತ್‌ನ ಅನುಬವಿಚಿಡುವಿಯ.

13 ಜ್ಞಾನ ಇಲ್ಲತವ ಮಾತ್‌ವಾರಿಯು, ಒಂದು ಅರಿಯತ ಮೂಡತಿಯು ಆಯಿತುಂಡ್.

14 ಅವ ತಾಂಡ ಮನೆರ ಪಡಿರಲ್ಲಿಯು, ಪಟ್ಟಣತ್‌ರ ಎತ್ತರವಾನ ಜಾಗತ್‌ ಅಳ್‌ಪಕ್‌ ಕುಚಿನ ಇಟ್ಟಿತ್,

15 ಅಯಿಂಗಯಿಂಗಡ ಕೆಲಸತ್‌ರ ಮೇಲೆ ಪೋಪ ಜನಳ ಪಿಂಞ ಮಿಂಞ ಪೋಪಯಿಂಗಳ ನೋಟಿತ್:

16 ಸಾದು ಮನುಷ್ಯನೇ ಈ ಬರಿ ಬಾರೀಂದು, ಮುಟ್ಟಾಳಂಗಳೇ ನಾಡ ಪಕ್ಕ ಬಾರೀಂದು

17 ದಡ್ಡನ ನೋಟಿತ್: ಕದ್ದ ನೀರ್‌ ಮೊದ್ರವಾಯಿತ್‌ಪ್ಪ, ಗುಟ್ಟಾನ ಜಾಗತ್‌ಲ್‌ ಉಂಬ ಆಹಾರ ನಲ್ಲ ಸುಕವಾಯಿತ್‌ ಇಪ್ಪಾಂದ್‌ ಎಣ್ಣುವ.

18 ಆಚೇಂಗಿ ಚತ್ತಯಿಂಗ ಅವಡ ಮನೆಲ್ ಉಂಡ್‍ೕಂದು, ಅವಡ ಬೆಂದ್‌ಕ ಆಳವಾನ ನರಕ ಪಾತಾಳತ್‌ ಉಂಡ್‍ೕಂದು ಅಂವೊಂಗ್‌ ಗೊತ್ತ್‌ಲೆ.

© 2017, New Life Literature (NLL)

Lean sinn:



Sanasan