Biblia Todo Logo
Bìoball air-loidhne

- Sanasan -

ಜ್ಞಾನತ್‌ರ ಪಡಿಮ 27 - ಕೊಡವ ಬೈಬಲ್

1 ನಾಳೆರ ವಿಷಯತ್‌ ಕೊಚ್ಚಿಯೊತೆ. ಒರ್‌ ದಿನಕು ಎಂತ ಆಪ ಎಣ್ಣಿಯಂಡ್‌ ನೀಕ್‌ ಗೊತ್ತ್‌ಲೆಲ್ಲಾ.

2 ನಿನ್ನ ನೀನೆ ಕೊಂಡಾಡತೆ, ಬೋಂಡಿಯೇಂಗಿ ಇಂಞೊಬ್ಬ ನಿನ್ನ ಹೊಗಳಡ್. ನಿನ್ನ ನೀನೇ ಕೊಂಡಾಡಿಯೊತೆ, ಬೋರೆ ಒಬ್ಬೊ ನಿನ್ನ ಕೊಂಡಾಡಡ್.

3 ಕಲ್‌ಲ್‌ ಕನವಾಯಿತು, ಮರ್‌ಳ್‌ ಬಾರವಾಯಿತು ಇಪ್ಪ. ಮೂಡಂಡ ಬಲ್ಯ ಚೆಡಿ ಈ ದಂಡ್‌ಕಿಂಜಿ ಬಾರವಾಯಿತ್‌ಪ್ಪ.

4 ಬಲ್ಯ ಚೆಡಿ ಕ್ರೂರವಾನದ್. ಚೆಡಿ ಪಾಳ್ಮಾಡಿರುವ. ಆಚೇಂಗಿ ಹೊಟ್ಟೆಕಿಚ್ಚ್‌ರ ಮಿಂಞ ದಾರ್‌ಕ್‌ ನಿಪ್ಪಕಯ್ಯು?

5 ಅಡಕಿತ್‌ ಬೆಚ್ಚಿತುಳ್ಳ ಪ್ರೀತಿಕಿಂಜಿ ಚೂಕ್‌ಚಿಡೊದ್‌ ನಲ್ಲದ್.

6 ಸ್ನೇಹಿತ ಮಾಡುವ ಗಾಯ ನಂಬಿಕೆಯುಳ್ಳದ್. ಆಚೇಂಗಿ ಶತ್‌ರು ತಪ್ಪ ಮುತ್ತೆಲ್ಲಾ ವಂಚನೆಯುಳ್ಳದ್.

7 ಕೆಲ ದುಂಬ್‌ನಂವೊ ತೇನ್ನ ಬೋಂಡಾಂದೇ ಎಣ್ಣುವ, ಆಚೇಂಗಿ ಕೆಲಪೈಚಿತ್‌ ಉಳ್ಳಂವೊಂಗ್‌ ಕೈಪಾನ ಆಹಾರ ಸಹ ಮೊದರವಾಯಿತ್‌ ಇಪ್ಪ.

8 ತಾಂಡ ಗೂಡ್‌ನ ಬುಟ್ಟಿತ್‌ ತಿರ್‌ಗಾಡುವ ಪಕ್ಷಿ ಎನ್ನನೆ ಇಪ್ಪೊ, ಅನ್ನನೆ ತಾಂಡ ಮನೆನ ಬುಟ್ಟಿತ್‌ ತಿರ್‌ಗಾಡುವ ಮನುಷ್ಯನು ಇಪ್ಪ.

9 ತೈಲವು, ಸುಗಂದ ದೂಪವು ಹೃದಯತ್‌ನ ಕುಶಿ ಪಡ್‌ತುವನೆಕೆ, ಸ್ನೇಹಿತಂಡ ಹೃದಯತ್‌ಂಜ ಬಪ್ಪ ನಲ್ಲ ಆಲೋಚನೆ ಸುಕ ತಪ್ಪ.

10 ನೀಡ ಸ್ನೇಹಿತನ ಆಡ್, ನೀಡ ಅಪ್ಪಂಡ ಸ್ನೇಹಿತನ ಆಡ್‌ ಮರ್‌ಕತೆ. ನೀಡ ಆಪಾಯತ್‌ರ ನೇರತ್‌ ನೀಡ ಅಣ್ಣತಮ್ಮಣಂಡ ಮನೆಕ್‌ ಪೋಕತೆ. ದೂರತ್‌ಲ್‌ ಉಳ್ಳ ನೀಡ ಅಣ್ಣತಮ್ಮಣಂಗಕಿಂಜಿ ಪಕ್ಕತ್‌ಲ್‌ ಉಳ್ಳ ನೀಡ ನೆರೆಮನೆಕಾರನೇ ಮೇಲ್.

11 ನಾಡ ಮೋನೇ, ನನ್ನ ಅವಮಾನ ಪಡುತ್‌ವಂವೊಂಗ್‌ ಜವಾಬ್ ಕೊಡ್‌ಪನೆಕೆ ನೀನ್‌ ಜ್ಞಾನವುಳ್ಳಂವನಾಯಿತ್‌ ಇಂಜಂಡ್‌ ನನ್ನ ಕುಶಿಪಡ್‌ತ್.

12 ವಿವೇಕ ಉಳ್ಳಂವೊ ಕ್‍ೕಡ್‌ನ ಕಂಡಿತ್‌ ಆ ಬಟ್ಟೆನೇ ಬುಟ್ಟಿತ್‌ ಪೋಪ. ಆಚೇಂಗಿ ಸಾದು ಮನುಷ್ಯ ಕ್‍ೕಡ್‌ರ ಬಟ್ಟೆಲ್‌ ನೇರೆ ಪೋಯಿತ್‌ ತೊಂದರೆಕ್‌ ಚಿಕ್ಕಿಯೊವ.

13 ಒಒಬ್ಬಂಡ ಸಾಲಕ್‌ ಜಾಮೀನ್‌ ಕೊಡ್‌ತವಂವೊಂಡ ಉಡ್‌ಪ್‌ನ ಎಡ್‌ತ. ಗೊತ್ತಿಲ್ಲತ ಒಬ್ಬಂಡ ತಕ್ಕ್‌ಕಾಯಿತ್‌ ಅಂವೊಂಡ ಕೈಯಿಂಞ ಪನ ಜಾಮೀನ್‌ ಎಡ್‌ತ.

14 ಪೊಲಾಕ ನೇರ್ತೆ ಎದ್ದಿತ್‌ ತಾಂಡ ಸ್ನೇಹಿತಂಗ್‌ ಕೂತ್‌ಟ್ಟಿತ್‌ ಆಶೀರ್ವಾದ ಮಾಡ್‌ವದ್‌ನ ಆಶೀರ್ವಾದವಾಯಿತ್‌ ಕಾಂಗತೆ, ಶಾಪ ಇಡುವನೆಕೆ ಕಾಂಬ.

15 ಜಗಳ ಮಾಡುವ ಪೊಣ್ಣು, ಬಲ್ಯ ಮಳೆರ ದಿವಸತ್‌ ನಿಕ್ಕತೆ ಚೋರುವ ನೀರೂ ಸೆರಿಸಮ.

16 ಅವಳ ಅಡಕ್‌ವಕ್‌ ಮಾಡುವ ಪ್ರಯತ್‌ನ, ಗಾಳಿನ ಅಡಕಿತ್‌ ತಾಂಡ ಬಲ್‌ತ ಕೈಯಿಲ್‌ ಎಣ್ಣೇನ ಪುಡಿಪಕ್‌ ಪ್ರಯತ್‌ನಪಡುವನೆಕೆ ಇಪ್ಪ.

17 ಇರ್‌ಂಬ್‌ನ ಇರ್‌ಂಬ್ ಚಾಣೆ ಮಾಡುವನೆಕೆ, ಒರ್‌ ಮನುಷ್ಯ ತಾಂಡ ಸ್ನೇಹಿತನ ಚಾಣೆ ಮಾಡುವ.

18 ಅತ್ತಿಮರತ್‌ನ ನೋಟಿಯಂವೊ ಅದ್‌ಂಡ ಪಣ್ಣ್‌ನ ತಿಂಬ. ಅನ್ನನೆ ಯಜಮಾನನ ಕಾಪಂವೊ ಗನತ್‌ನ ಪಡೆಯುವ.

19 ನೀರ್‌ ಮೂಡ್‌ರ ಪ್ರತಿಬಿಂಬತ್‌ನ ಕಾಂಬಿಚ್ಚಿಡುವನೆಕೆ ಮನುಷ್ಯಂಡ ಹೃದಯ ಅಯಿಣಗಡ ನೇರಾನ ರೂಪತ್‌ನ ಕಾಟುವ.

20 ಪಾತಾಳವು ನಾಶನವು ತೃಪ್ತಿ ಆಪದೇ ಇಲ್ಲೆ. ಅನ್ನನೆ ಮನುಷ್ಯಂಡ ಆಸೆಕು ಮಿತಿಯೇ ಇಲ್ಲೆ.

21 ಜನ ಬೊಳ್ಳಿನ ತಿತ್‌ ಬೂಕ್ಕು ಪಾತ್‌ರತ್‌ಲು ಪೊನ್ನ್‌ನ ತಿತ್ತ್‌ ತೊಳೆಯಿಲು ಇಟ್ಟಿತ್‌ ಪರೀಕ್ಷೆ ಮಾಡುವ ಮಾಡುವನೆಕೆ, ಮನುಷ್ಯಂಗ್‌ ಜನಡಿಂಜ ಬಪ್ಪ ಹೊಗಳಿಕಯೇ ಪರೀಕ್ಷೆ ಆಪ.

22 ಮೂಡನ ಒರಲ್‌ಲ್‌ ಇಟ್ಟಿತ್‌ ಒನಕೆಯಿಂಜ ದಾನ್ಯತ್‌ರ ಕಾಳ್‌ರ ಬೋರೆ ಮಾಡುವಕ್ಕಾಯಿತ್‌ ಜಜ್ಜ್‌ವನೆಕೆ ಮಾಡ್‌ಚೇಂಗಿಯು, ಅಂವೊಂಡ ಮೂಡತನ ಅಂವೊನ ಬುಟ್ಟಿತ್‌ ಪೋಪುಲೆ.

23 ನೀಡ ಆಡ್‌ಕೊರಿಯಡ ಸ್ತಿತಿಗತಿನ ಚಾಯಿತೆ ಅರಂಜಿತ್‌ ಬೆಚ್ಚ. ನೀಡ ಹಿಂಡ್‌ನ ಎಚ್ಚರಿಕೆಯಿಂಜ ಕಾಕಂಡು.

24 ಐಶ್ವರ್ಯ ಎಕ್ಕಾಲು ನೆಲೆನಿಪ್ಪುಲೆ. ಅನ್ನನೆ ಕಿರೀಟವು ಪರಂಬರೆ ಪರಂಬರೆಕು ಇಪ್ಪುಲೆ.

25 ಪಿಲ್ಲ್‌ನ ಕತ್ತರಿಚಿಟ್ಟಪಿಂಞ ಪುದಿಯ ಪಿಲ್‌ಲ್‌ ಬಪ್ಪ. ಕುಂದ್ರ ಕೊಡಿಲ್‌ ಉಳ್ಳ ಪಿಲ್ಲ್‌ನ ಕೂಟಿತ್‌ ಬೆಪ್ಪ.

26 ನೀಡ ಕೊರಿಕುಟ್ಟಿ ರೋಮ ನೀಕ್‌ ಉಡ್‌ಪ್‌ನ ತಪ್ಪ. ನೀಡ ಆಡುವಳ ಮಾರಿತ್‌ ಬೇಲ್‌ನ ಕ್ರಯಕ್‌ ಎಡ್‌ಕೊಲು.

27 ಆಡುವಡ ಪಾಲ್‌ ನೀಕು, ನೀಡ ಮನೆಕಾರಕು, ನೀಡ ಪಣಿರ್‌ಕಾತಿಯ ಜೀವನ ಮಾಡ್‌ವಕು ಮದಿಯಾಪ.

© 2017, New Life Literature (NLL)

Lean sinn:



Sanasan