Biblia Todo Logo
Bìoball air-loidhne

- Sanasan -

ಜ್ಞಾನತ್‌ರ ಪಡಿಮ 22 - ಕೊಡವ ಬೈಬಲ್

1 ದುಂಬ ಐಶ್ವರ್ಯಕಿಂಜಿ ನಲ್ಲ ಪೆದತ್‌ನ ಆಯ್ಕೆ ಮಾಡ್‌ವದ್‌ ನಲ್ಲದ್. ಬೊಳ್ಳಿ ಪೊನ್ನ್‌ಕಿಂಜಿ ಬೋರೆಯಿಂಗಡ ಕೈಯಿಂಜ ಕ್‌ಟ್ಟುವ ನಲ್ಲೋನೆಯೆ ನಲ್ಲದ್.

2 ಇದ್‌ ಐಶ್ವರ್ಯವಂತಂವೊಂಗು ಗರಿಬಂಗು ಒಂದೇ ಆಯಿತುಂಡ್. ಅಯಿಂಗಳೆಲ್ಲ ಸೃಷ್ಟಿಮಾಡ್‌ನಂವೊ ಯೆಹೋವನೇ.

3 ವಿವೇಕ ಉಳ್ಳಂವೊ ಕ್‍ೕಡ್‌ನ ಕಂಡಿತ್‌ ಆ ಬಟ್ಟೆನೇ ಬುಟ್ಟಿತ್‌ ಪೋಪ. ಆಚೇಂಗಿ ಸಾದು ಮನುಷ್ಯ ಕ್‍ೕಡ್‌ರ ಬಟ್ಟೆಲ್‌ ನೇರೆ ಪೋಯಿತ್‌ ತೊಂದರೆಕ್‌ ಚಿಕ್ಕಿಯೊವ.

4 ತಗ್ಗಿತ್‌ ಪಿಂಞ ಯೆಹೋವಂಗ್‌ ಬೊತ್ತಿತ್‌ ನಡ್‌ಂದ್‌ತೇಂಗಿ ಅದ್‌ಂಡ ಫಲವಾಯಿತ್‌ ಐಶ್ವರ್ಯ, ಗೌರವ ಪಿಂಞ ಜೀವ ಕ್‌ಟ್ಟು.

5 ಕಪಟತನ ಉಳ್ಳಂವೊಂಡ ಬಟ್ಟೆಲ್‌ ದುಂಬ ಮುಳ್ಳು ಕೆಣಿಯು ಉಂಡ್. ಆಚೇಂಗಿ ತಾಂಡ ಆತ್ಮತ್‌ನ ಕಾಪಂವೊ ಅದ್‌ನೆಲ್ಲಾ ಬುಟ್ಟಿತ್‌ ದೂರ ಇಪ್ಪ.

6 ಕುಂಞಿನ ನಲ್ಲ ಬಟ್ಟೆಲ್‌ ನಡ್‌ತ್. ಅಂವೊ ವಯಸ್ಸಾನ ಪಿಂಞ ಸಹ ಅದ್‌ನ ಬುಟ್ಟಿತ್‌ ದೂರ ಪೋಪುಲೆ.

7 ಐಶ್ವರ್ಯವಂತ ಗರೀಬನ ಆಳ್‌ವಿಕೆ ಮಾಡುವ. ಸಾಲ ಎಡ್‌ತಂವೊ ಸಾಲ ಕೊಡ್‌ತಂವೊಂಗ್‌ ಅಡಿಯಾಳಾಯಿತ್‌ಪ್ಪ.

8 ಅನ್ಯಾಯತ್‌ನ ಬಿತ್ತುವಂವೊ ಕ್‍ೕಡ್‌ನ ಕೊಯ್ಯುವ. ಅಂವೊಂಡ ಬಲ್ಯ ಚೆಡಿರ ಕೋಲ್‌ ನಾಶ ಆಯಿಪೋಪ.

9 ದಯೆ ಕಣ್ಣ್‌ ಉಳ್ಳಂವೊಂಗ್‌ ಆಶೀರ್ವಾದ ಕ್‌ಟ್ಟುವ. ಎನ್ನಂಗೆಣ್ಣ್‌ಚೇಂಗಿ, ಅಂವೊ ತಾಂಡ ಕೂಳ್‌ನ ಗರೀಬಂಗ್‌ ಕೊಡ್‌ಪ.

10 ಪರಿಹಾಸ ಮಾಡ್‌ವಂವೊನ ದೌತ್. ಅಕ್ಕ ಜಗಳ ತೊಲಗುವ. ವಾದ ಆಡ್‌ ಅವಮಾನ ಆಡ್‌ ಇಲ್ಲತೆ ಆಪ.

11 ಶುದ್ದ ಹೃದಯತ್‌ನ ಕುಶಿ ಪಡುವಂವೊಂಡ ತಕ್ಕ್‌ ಸುಕವಾಯಿತ್‌ ಇಪ್ಪ; ರಾಜ ಅಂವೊಂಗ್‌ ಸ್ನೇಹಿತನಾಯಿತ್‌ ಕ್‌ಟ್ಟುವ.

12 ಯೆಹೋವ ಅರಿವು ದುಂಬನಯಿಂಗಳ ಕಣ್ಣ್‌ಬೆಚ್ಚಿತ್‌ ಕಾಪಾಡುವ. ದ್ರೋಹಿಯಡ ತಕ್ಕ್‌ನ ಅಂವೊ ನಾಶ ಮಾಡುವ.

13 ಪೊರಮೆ ಸಿಂಹ ಉಂಡ್, ನಾನ್‌ ಪೋಪ ಬಟ್ಟೆಲ್‌ ಅದ್‌ ನನ್ನ ಕೊಂದ್ರುವಾಂದ್‌ ಸೋಮಾರಿ ಎಣ್ಣುವ.

14 ವ್ಯಬಿಚಾರಿಯಡ ಬಾಯಿ ಆಳವಾನ ಕುಂಡ್‌ರನೆಕೆ. ಯೆಹೋವನ ಚೆಡಿ ಮಾಡ್‌ವೊಂವೊ ಅದ್‌ಲ್‌ ಬೂವ.

15 ಕುಂಞಿಯಡ ಹೃದಯತ್‌ಲ್‌ ಮೂಡತನ ಅಂಟಿಯಂಡಿಪ್ಪ. ಆಚೇಂಗಿ ಶಿಕ್ಷೆ ತಪ್ಪ ಕೋಲ್ಯಿಂಜ ಅದ್‌ ತೊಲಗುವ.

16 ತಾನ್‌ ಅಬಿವೃದ್ದಿ ಆಂಡೂಂದ್‌ ಗರೀಬನ ಹಿಂಸೆಪಡ್‌ತವಂವೊನು, ಐಶ್ವರ್ಯವಂತಂವೊಂಗ್‌ ಇನಾಮ್‌ ಕೊಡ್‌ಪ ದಂಡಾಳು ಗರೀಬನಾಪ.


ಜ್ಞಾನಿಯಡ ತಕ್ಕ್‌

17 ಕೆಮಿಕೊಡ್‌ತಿತ್‌ ಜ್ಞಾನಿಯಡ ತಕ್ಕ್‌ನ ಕ್‍ೕಟಿತ್, ನಾಡ ಬೋದನೆನ ನೀಡ ಮನಸ್ಸ್‌ಲ್‌ ಬೆಚ್ಚ.

18 ಈ ಬೋದನೆನ ನೀಡ ಹೃದಯತ್‌ಲ್‌ ಬೆಚ್ಚಂಡ್, ಕ್ಷಣತ್‌ಲ್‌ ಎಣ್ಣ್‌ವಕ್‌ ಕೈಯ್ಯುವದಾಚೇಂಗಿ ಅದ್‌ ದುಂಬ ಚಾಯಿ ಇಪ್ಪ.

19 ನೀಡ ನಂಬಿಕೆ ಯೆಹೋವಂಡ ಮೇಲೆ ಇಡಂಡೂಂದ್, ಅದ್‌ನೆಲ್ಲಾ ಈ ದಿವಸ ನಾನ್‌ ನೀಕ್‌ ಎಣ್ಣಿ ತಂದಂಡುಳ್ಳ.

20 ಸತ್ಯ ವಾಕ್ಯ ಕಳಂಗ ಇಲ್ಲತದ್‌ ಎಣ್ಣಿಯಂಡ್‌ ನೀಕ್‌ ಗೊತ್ತಾಪನೆಕೆಯು, ನೀನ್‌ ನಿನ್ನ ಅಯಿಚಯಿಂಗಕ್‌ ಸತ್ಯತ್‌ರ ಜವಾಬ್‌ನ ಕೊಡ್‌ಪನೆಕೆಯು,

21 ಅಲೋಚನೆರ ಪಿಂಞ ಜ್ಞಾನತ್‌ರ ವಿಷಯತ್‌ ನಾನ್‌ ನೀಕ್‌ ಮಿಂಞಲೇ ಒಳ್‌ದಿತುಳ್ಳಲ್ಲಾ.

22 ಗರೀಬಂಗಕ್‌ ಬೋರೆ ಬಟ್ಟೆ ಇಲ್ಲೆ ಎಣ್ಣಿಯಂಡ್‌ ಅಯಿಂಗಳ ಲೂಟಿ ಮಾಡತೆ. ನ್ಯಾಯಾಲಯತ್‌ ಅಯಿಂಗಳ ಉಪತ್‌ರ ಪಡ್‌ತತೆ.

23 ಎನ್ನಂಗೆಣ್ಣ್‌ಚೇಂಗಿ ಯೆಹೋವ ಅಯಿಂಗಕಾಯಿತ್‌ ವಾದ ಮಾಡಿತ್, ಅಯಿಂಗಳ ನಾಶ ಮಾಡ್‌ನಯಿಂಗಡ ಜೀವತ್‌ನ ನಾಶ ಮಾಡಿರುವ.

24 ಮುಂಜೆಡಿಗಾರಂಗ್‌ ಸ್ನೇಹಿತನಾಯಿತ್‌ ಇರತೆ. ತಟ್ಟನೆ ಬಲ್ಯ ಚೆಡಿಬಪ್ಪಂವೊಂಡ ಕೂಡೆ ಸಹವಾಸ ಮಾಡತೆ.

25 ಅನ್ನನೆ ಮಾಡ್‌ಚೇಂಗಿ ನೀನು ಅಂವೊಂಡ ಕೆಟ್ಟ ನಡ್‌ತೆನ ಪಡಿಚಿತ್, ನೀಡ ಆತ್ಮಕ್‌ ಕೆಣಿ ಬೆಚ್ಚೊವಿಯ.

26 ಇಂಞೊಬ್ಬಂಡ ಸಾಲಕ್‌ ಜಾಮೀನ್‌ ಕೊಡ್‌ಪಯಿಂಗಡಡೆಲ್‌ ತಕ್ಕ್‌ ಕೊಡ್‌ಪ್ಪ ಒಬ್ಬೊನಾಯಿತ್‌ ಇರತೆ.

27 ನೀಕ್‌ ಅಂವೊಂಡ ಸಾಲತ್‌ನ ತ್‍ೕಪಕ್‌ ಕಯ್ಯತೆ ಪೋಚೇಂಗಿ, ನೀನ್‌ ಬುದ್ದಂಡುಳ್ಳ ಮೆತ್ತೆನ ಸಹ ಅಂವೊ ಎಡ್‌ತಂಡ್‌ ಪೊಪಲ್ಲಾ?

28 ನೀಡ ಮುತ್ತಜ್ಜಂಗ ಪೂರ್ವ ಕಾಲತ್‌ ಇಟ್ಟ ಅದ್ದ್ ಕಲ್ಲ್‌ನ ಅನ್‌ಂಗತೆ.

29 ತಾಂಡ ಕೆಲಸತ್‌ನ ಸಾಮಾರ್ತನಾಯಿತ್‌ ಮಾಡ್‌ವಂವೊನ ನೋಟ್, ಅನ್ನನೆ ಉಳ್ಳ ಮನುಷ್ಯ ಸಾಮಾನ್ಯ ಮನುಷ್ಯಂಗಕ್‌ ಅಲ್ಲ ಆಚೇಂಗಿ ರಾಜಂಗಕ್‌ ಸೇವೆ ಮಾಡುವ.

© 2017, New Life Literature (NLL)

Lean sinn:



Sanasan