Biblia Todo Logo
Bìoball air-loidhne

- Sanasan -

ಮಲಾಕಿ 3 - ಕೊಡವ ಬೈಬಲ್

1 ಇದಾ! ನಾನ್‌ ನಾಡ ದೂತನ ಅಯಿಪಿ, ಅಂವೊ ನಾಡ ಮಿಂಞತ್‌ ಪೋಯಿತ್, ಬಟ್ಟೆನ ತಯಾರ್‌ ಮಾಡುವ. ಅಕ್ಕ ನಿಂಗ ತ್‍ೕಡಿಯಂಡುಳ್ಳ ಯೆಹೋವನು, ನಿಂಗ ಕುಶಿಪಡುವ ಒಪ್ಪಂದತ್‌ರ ದೂತನು ತಾಂಡ ದೇವಾಲಯಕ್‌ ಬೆರಿಯ ಬಪ್ಪ. ಇದಾ, ಅಂವೊ ಬಂದಂಡುಂಡ್‍ೕಂದ್‌ ಸೇನೆರ ಯೆಹೋವ ಎಣ್ಣಿಯಂಡುಂಡ್.

2 ಆಚೇಂಗಿಯು ಅಂವೊ ಬಪ್ಪ ದಿವಸತ್‌ನ ದಾರ್‌ ಸೈಸುವಕಯ್ಯು? ಅಂವೊ ಪ್ರತ್ಯಕ್ಷ ಆಪಕ ದಾರ್‌ಕ್‌ ನಿಪ್ಪಕಯ್ಯು? ಅಂವೊ ಬೊಳ್ಳಿನ ಚುಟ್ಟಿತ್‌ ಶುದ್ದ ಮಾಡ್‌ವಂವೊನೆಕೆಯು ಇಲ್ಲತ ಪೋಚೇಂಗಿ ಬಟ್ಟೆ ಒಲೀಪ್ಪಂವೊಂಡ ಸೋಪ್ಪ್‌ರನೆಕ್ಕಯ ಇಪ್ಪ.

3 ಅಂವೊ ಶುದ್ದಮಾಡುಬವನೆಕೆ ಅಳತ್ತಿತ್‌ ಬೊಳ್ಳಿನ ಚಾಯಿ ಮಾಡುವ; ಅಂವೊ ಲೇವಿಯಡ ಸಂತಾನತ್‌ನ ಬೊಳ್ಳಿ ಪಿಂಞ ಪೊನ್ನ್‌ರನೆಕೆ ಸುದ್ದಮಾಡುವ. ಪಿಂಞ ಒಡಯನಾನ ಯೆಹೋವಂಗ್‌ ನೀತಿರ ಕಾಣಿಕೆ ಅರ್ಪ್ಪಿಚ್ಚಿಡುವ ಜನ ಇಪ್ಪ.

4 ಅಕ್ಕ ಪಂಡ್‌ ಕಾಲತ್‌ಲ್‌ ಇಂಜನೆಕೆಯು ಮಿಂಞತ್‌ರ ಕಾಲತ್‌ಲ್‌ ಇಂಜನೆಕೆಯು ಯೆಹುದಯಿಂಗಡ ಕಾಣಿಕೆಯು, ಯೆರುಸಲೇಮ್ರ ಕಾಣಿಕೆಯು ಯೆಹೋವಂಗ್‌ ಕುಶಿಯಾಯಿತಿಪ್ಪ.

5 ನಾನ್‌ ನ್ಯಾಯ ತೀರ್‌ಪ್‌ ಮಾಡುವಕಾಯಿತ್‌ ನಿಂಗಡ ಪಕ್ಕ ಬಪ್ಪಿ. ಬಂದಿತ್‌ ಮಂತ್‌ರವಾದಿಯಂಗಕು, ವ್ಯಬಿಚಾರಿಯಂಗಕು, ಪೊಟ್ಟ್‌ ಸಾಕ್ಷಿ ತಪ್ಪಯಿಂಗಕು, ಪಣಿಕಾರಂಗಕ್‌ ಅಯಿಂಗಡ ಕೂಲಿನ ಕೊಡ್‌ಕತೆ ಕಳಿಪ್‌ಚಿಡುವಯಿಂಗಕು, ವಡಿಯ ಚತ್ತ್‌ ಪೋನಯಿಂಗಕ್, ಅನಾತೆ ಕುಂಞಿಯಕ್, ಪರದೇಶಿಯಂಗಕ್‌ ಮೋಸ ಮಾಡುವಯಿಂಗಕು, ನಾಕ್‍ ಬೊತ್ತತೆ ಉಳ್ಳಯಿಂಗಕು ವಿರೋದವಾಯಿತ್‌ ನಾನ್‌ ಸಾಕ್ಷಿಯಾಯಿತ್‌ಪ್ಪೀಂದ್‌ ಸೇನೆರ ಯೆಹೋವ ಎಣ್ಣಿಯಂಡುಂಡ್.

6 ನಾನ್‌ ಒಡಯನಾನ ಯೆಹೋವ, ನಾನ್‌ ಬದ್‌ಲಾಪುಲೆ; ಆನಗುಂಡ್‌ ಯಾಕೋಬಂಡ ಮಕ್ಕಳಾನ ನಿಂಗ ನಾಶ ಆಯಿತ್‌ಲ್ಲೆ.

7 ನಿಂಗ ನಿಂಗಡ ಮುತ್ತಜ್ಜಂಗಡ ಕಾಲತ್‌ಂಜ ನಾಡ ಆಜ್ಞೆರ ಪ್ರಕಾರ ನಡ್‌ಕತೆ, ಅದ್‌ನ ಬುಟ್ಟಿತ್‌ ದೂರ ಪೋಯಿರ. ನಾಡ ಪಕ್ಕ ತಿರಿತ್‌ ಬಾರಿ, ಅಕ್ಕ ನಿಂಗಡ ಪಕ್ಕ ನಾನ್‌ ತಿರಿತ್‌ ಬಪ್ಪೀಂದ್‌ ಸೇನೆರ ಯೆಹೋವ ಎಣ್ಣಿಯಂಡುಂಡ್. ಆಚೇಂಗಿ ನಿಂಗ: ನಂಗ ಏದ್‌ ವಿಷಯತ್‌ ತಿರಿತ್‌ ಬರಂಡೂಂದ್‌ ಕ್‍ೕಪಿರ.


ಯೆಹೋವನಾನ ದೇವನ ಕಕ್ಕಂಡ

8 ಮನುಷ್ಯ ಒಡಯನಾನ ಯೆಹೋವ ದೇವನ ಕಪ್ಪಕಯ್ಯುವ? ಆಚೇಂಗಿ ನಿಂಗ ನನ್ನ ಕದ್ದಿತುಳ್ಳಿರ. ಏದ್‌ ವಿಷಯತ್‌ಲ್‌ ನಂಗ ಕದ್ದಿಯೇಂದ್‌ ಕ್‍ೕಪಿರ? ಪತ್ತ್‌ಲ್‌ ಒರ್‌ ಬಾಗತ್‌ನ ದೇವಕ್‌ ಕೊಡ್‌ಪದ್‌ಲ್‌ ಪಿಂಞ ಕಾಣಿಕೆಲೇ ನಿಂಗ ಕದ್ದಂಡುಳ್ಳಿರ.

9 ನಿಂಗ ಎಣ್ಣ್‌ಚೇಂಗಿ, ಇಡೀ ದೇಶ ನನ್ನ ಕದ್ದಂಡುಳ್ಳಿರ. ಆನಗುಂಡ್‌ ನಿಂಗಕ್‌ ಶಾಪ ಕ್‌ಟ್ಟಿತುಂಡ್.

10 ನಾಡ ಮನೆಲ್ ಆಹಾರ ಕಮ್ಮಿ ಆಕತನೆಕೆ ಪತ್ತ್‌ಲ್‌ ಒರ್‌ ಬಾಗತ್‌ನ ಪತ್ತಾಯ ಕೋಂಬರೆಕ್‌ ಕೊಂಡ ಬಾರಿ. ಅಕ್ಕ ನಾನ್‌ ಬಾನತ್‌ರ ಪಡಿನ ತೊರ್‌ಂದಿತ್, ಕೂಟಿ ಬೆಪ್ಪಕ್‌ ಜಾಗ ಇಲ್ಲತೆ ಪೋಪನೆಕೆ ನಿಂಗಡ ಮೇಲೆ ಆಶೀರ್ವಾದತ್‌ನ ತೊರಿಯುವನೋ ಇಲ್ಲೆಯೋಂದ್‌ ನನ್ನ ಪರೀಕ್ಷೆ ಮಾಡೀಂದ್‌ ಸೇನೆರ ಯೆಹೋವ ಎಣ್ಣಿಯಂಡುಂಡ್.

11 ನಿಂಗಡಗುಂಡ್, ಬೇಲ್‌ರ ಫಲತ್‌ನ ನಾಶ ಮಾಡುವ ನೆಪ್ಪಾತೆಯಳ ನಾಶ ಮಾಡುವಕ್‌ ಬುಡುಲೆ. ಅದ್‌ ನಿಂಗಡ ಬೇಲ್‌ರ ಫಲತ್‌ನ ನಾಶ ಮಾಡುಲೆ, ನಿಂಗಡ ದ್ರಾಕ್ಷಿ ಬಳ್ಳಿಲ್‌ ಪಣ್ಣ್‌ ಇಲ್ಲತೆ ಪೋಪ್‌ಲೇಂದ್‌ ಒಡಯನಾನ ಸೇನೇನ ಯೆಹೊವ ಎಣ್ಣಿಯಂಡುಂಡ್.

12 ಅಕ್ಕ ಎಲ್ಲಾ ಜಾತಿಯಳು ನಿಂಗಳ ಆಶೀರ್ವಾದ ಪಡಂದಂವಯಿಂಗಾದ್‌ ಎಣ್ಣುವ, ನಿಂಗಡ ದೇಶ ಎಲ್ಲಾರ್‌ಕು ಕುಶೀರ ದೇಶವಾಯಿತಿಪ್ಪಾಂದ್‌ ಒಡಯನಾನ ಸೇನೇನ ಯೆಹೊವ ಎಣ್ಣಿಯಂಡುಂಡ್‌

13 ನಿಂಗ ನಾಕ್‍ ವಿರೋದವಾಯಿತ್‌ ಪರ್‌ಂದ ತಕ್ಕ್‌ ದುಂಬ ಕಠಿಣವಾಯಿತ್‌ ಉಂಡ್‍ೕಂದ್‌ ಯೆಹೋವ ಎಣ್ಣಿಯಂಡುಂಡ್. ಆಚೇಂಗಿಯು ನಿಂಗ: ನೀಕ್‌ ವಿರೋದವಾಯಿತ್‌ ನಂಗ ಎಂತ ತಕ್ಕ ಪರ್‌ಂದಿಯೇಂದ್‌ ಕ್‍ೕಪಿರ?

14 ದೇವಂಗ್‌ ಸೇವೆ ಮಾಡ್‌ವದ್‌ ವ್ಯರ್ತ. ಅಂವೊಂಡ ಆಜ್ಞೆರ ಪ್ರಕಾರ ನಡ್‌ಂದಿತ್, ನಂಗ ಮಾಡ್‌ನ ಪಾಪಕಾಯಿತ್‌ ಸೇನೇನ ಒಡಯನಾನ ಯಹೋವಂಡ ಮಿಂಞತ್‌ ದುಃಖ ಪಟ್ಟಂಡುಳ್ಳಗುಂಡ್‌ ಎಂತ ಪ್ರಯೋಜನಾಂದ್‌ ನಿಂಗ ಎಣ್ಣಿಯಂಡುಳ್ಳಿರ.

15 ಇಕ್ಕ, ಆಂಗಾರಿಯಳ ಆಶೀರ್ವಾದ ಪಡ್‌ಂದಯಿಂಗಾಂದ್‌ ಕೊಂಡಾಡುವ; ಕ್‍ೕಡ್‌ ಮಾಡುವಯಿಂಗ ಅಬಿವೃದ್ದಿ ಪಡೆಯುವ ಮಾತ್‌ರ ಅಲ್ಲ, ಅಯಿಂಗ ಯೆಹೋವನಾನ ದೇವನ ತಾಂಗಡ ದುಷ್ಟತನತ್‌ರಗುಂಡ್‌ ಪರೀಕ್ಷೆ ಮಾಡ್‌ಚೇಂಗಿಯು ಬಚಾವ್‌ ಆಪಾಂದ್‌ ಎಣ್ಣಿಯಂಡುಳ್ಳಿರಲ್ಲಾ!

16 ಅಕ್ಕ ಯೆಹೋವಂಗ್‌ ಬತ್ತ್‌ತವಯಿಂಗ ಅಯಿಂಗಯಿಂಗಳೇ ತಕ್ಕ್‌ ಪರಿಯುವ. ಒಡಯನಾನ ಯೆಹೊವ ಎಚ್ಚರತ್‌ಲ್‌ ಕ್‍ೕಪ; ಯೆಹೋವಂಗ್‌ ಬೊತ್ತ್‌ವಯಿಂಗಕಾಯಿತು, ಒಡಯನಾನ ಯೆಹೋವಡ ಪೆದತ್‌ನ ಗನಪಡ್‌ತ್‌ವಯಿಂಗಕಾಯಿತು ಅಂವೊಂಡ ಮಿಂಞತ್‌ ಒರ್‌ ಞಾಪಕ ಪುಸ್ತಕ ಒಳದಿ ಬೆಚ್ಚಿತುಂಡ್.

17 ನಾನ್‌ ನಾಡ ಜನಳ ಕೂಟುವ ದಿವಸತ್‌ಲ್‌ ಅಯಿಂಗ ನಾಡ ಸ್ವಂತ ಜನವಾಯಿತ್‌ಪ್ಪಾಂದ್‌ ಒಡಯನಾನ ಯೆಹೋವ ಎಣ್ಣಿಯಂಡುಂಡ್. ಒರ್‌ ಮನುಷ್ಯ ಅಂವೊಂಗ್‌ ಸೇವೆ ಮಾಡುವ ತಾಂಡ ಮೋಂವೊನ ಕಾಪಾಡುವನೆಕೆ ನಾನ್‌ ಅಯಿಂಗಕ್‌ ಕರುಣೆ ಕಾಟುವಿ.

18 ಅಕ್ಕ ನಿಂಗ ನಿತಿವಂತಂವೊಂಗ್, ದುಷ್ಟಂಗಕು ಪಿಂಞ ಯೆಹೋವಂಗ್‌ ಸೇವೆ ಮಾಡುವಯಿಂಗಕು, ಸೇವೆ ಮಾಡತಯಿಂಗಕು ಆಪ್ಪ ವೆತ್ಯಸತ್‌ನ ಪುಃನ ಕಾಂಬಿರ.

© 2017, New Life Literature (NLL)

Lean sinn:



Sanasan