Biblia Todo Logo
Bìoball air-loidhne

- Sanasan -


ಆದ್ಯತ್‌ರ ಪುಸ್ತಕ 50 - ಕೊಡವ ಬೈಬಲ್

1 ಅಕ್ಕ ಯೋಸೇಫ ತಾಂಡ ಅಪ್ಪಂಡ ಮೂಡ್‌ರ ಮೇಲೆ ಬುದ್ದಿತ್‌ ಮೊರಟಂಡ್‌ ಅಂವೊಂಗ್‌ ಮುತ್ತ್‌ ಕೊಡ್‌ತತ್.

2 ಅಲ್ಲಿಂಜ ಅಂವೊ ತಾಂಡ ಸೇವಕಂಗಳಾನ ವೈದ್ಯಂಗಕ್‌ ತಾಂಡ ಅಪ್ಪಂಡ ಚಾವ್‌ ತಡಿನ ಸುಗಂದ ತೈಲತ್‌ಂಜ ತಯಾರ್‌ ಮಾಡ್‌ವಕ್‌ ಎಣ್ಣ್‌ಚಿ. ಅನ್ನನೆ ವೈದ್ಯಂಗ ಇಸ್ರಾಯೇಲ್‌ನ ಪೂಪಕ್‌ ತಯಾರ್ಮಾಡ್‌ಚಿ.

3 ಚಾವ್‌ ತಡಿನ ತಯಾರ್‌ ಮಾಡ್‌ವಕ್‌ ನಾಪದ್‌ ದಿವಸ ಆಪ. ಅನ್ನನೆ ಆ ನಾಪದ್‌ ದಿವಸವು ಕಯಿಂಜತ್. ಐಗುಪ್ತ ದೇಶತ್‌ರ ಜನ ಅಂವೊಂಗಾಯಿತ್‌ ಎಳ್‌ವದ್‌ ದಿವಸ ದುಃಖತ್‌ಲ್‌ ಇಂಜತ್.

4 ದುಃಖತ್‌ಲ್‌ ಇಪ್ಪ ಕಾಲ ಕಯಿಂಜ ಪಿಂಞ, ಯೋಸೇಫ, ಫರೋಹನಂಡ ಆಲೋಚನೆ ಅದಿಕಾರಿಯಂಗಡ ಪಕ್ಕ ಪೋಯಿತ್: ನಾಡ ಮೇಲೆ ನಿಂಗಕ್‌ ಕರುಣೆ ಇಂಜತೇಂಗಿ, ನಿಂಗ ಫರೋಹನಂಡ ಪಕ್ಕ ಪೋಯಿತ್, ಎಂತ ಎಣ್ಣಂಡೂಂದ್‌ ಎಣ್ಣ್‌ಚೇಂಗಿ,

5 ನಾಡ ಅಪ್ಪ ನನ್ನ ನೋಟಿತ್: ಕ್‍ೕಳ್, ನಾನ್‌ ಚತ್ತ್‌ ಪೋಪಿ. ನಾನ್‌ ಕಾನಾನ್‌ ದೇಶತ್‌ಲ್‌ ನಾಕಾಯಿತ್‌ ತಯಾರ್‌ ಮಾಡ್‌ನ ಗೋರಿಲ್‌ ನನ್ನ ಪೂಕೊಂಡೂಂದ್‌ ಎಣ್ಣಿತ್, ನಾಡ ಪಕ್ಕ ವಾಗ್ದಾನ ಮಾಡ್‌ಚಿಟ್ಟಂಡತ್. ಅದ್‌ಂಗ್‌ ನಾನ್‌ ಅಲ್ಲಿಕ್‌ ಪೋಯಿತ್‌ ನಾಡ ಅಪ್ಪನ ಪೂತಿತ್‌ ತಿರಿತ್‌ ಬಪ್ಪಕ್‌ ಅಪ್ಪಣೆ ಕೊಡ್‌ಕಂಡೂಂದ್‌ ಬೋಡ್‌ವೀಂದ್‌ ಎಣ್ಣೀಂದ್‌ ಎಣ್ಣ್‌ಚಿ.

6 ಅದ್‌ಂಗ್‌ ಫರೋಹನ: ನೀಡ ಅಪ್ಪ ನಿನ್ನಿಂಜ ವಾಗ್ದಾನ ಮಾಡ್‌ಚಿಟ್ಟಂಡನೆಕೆ ನೀನ್‌ ಪೋಯಿತ್‌ ನೀಡ ಅಪ್ಪನ ಪೂತಿತ್‌ ಬಾಂದ್‌ ಎಣ್ಣ್‌ಚಿ.

7 ಅನ್ನನೆ ಯೋಸೇಫ ತಾಂಡ ಅಪ್ಪನ ಪೂಪಕ್‌ ಪೊರ್‌ಟ್ ಪೋಪಕ ಅಂವೊಂಡ ಕೂಡೆ ಫರೋಹನಂಡ ಸೇವಕಂಗ, ಅರೆಮೆನೆಲ್‌ ಇಂಜ ಅಂವೊಂಡ ಅದಿಕಾರಿಯಂಗ ಪಿಂಞ ಐಗುಪ್ತ ದೇಶತ್‌ರ ಬಲ್ಯ ಅದಿಕಾರಿಯಂಗ,

8 ಯೋಸೇಫಂಡ ಮನೆಕಾರಂಗ, ಅಂವೊಂಡ ಅಣ್ಣತಮ್ಮಣಂಗ ಪಿಂಞ ಯಾಕೋಬಂಡ ಮನೆಕಾರಂಗೆಲ್ಲಾ ಅಂವೊಂಡ ಕೂಡೆ ಪೋಚಿ. ಆಚೇಂಗಿ ಚುಮ್ಮಿ ಮಕ್ಕಳ ಪಿಂಞ ಆಡ್‌ಕೊರಿಯಳ ಪಿಂಞ ಎತ್ತ್‌ಕಡ್‌ಚಿಯಳ ಮಾತ್‌ರ ಗೋಷೆನ್‌ ನಾಡ್‌ಲ್‌ ಬುಟ್ಟಿತ್‌ ಪೋಚಿ.

9 ರಥತ್‌ನ ಪಿಂಞ ಕುದುರೆಯಳ ಓಡ್‌ಚಿಡ್‌ವ ಪಡೆಯಾಳಿಯಳು ಯೋಸೇಫಂಡ ಕೂಡೆ ಪೋನಗುಂಡ್, ಜನಡ ಕೂಟ ದುಂಬ ಇಂಜತ್.

10 ಅಯಿಂಗ ಅಟಾದ್‌ ಎಣ್ಣುವ ಕಳಕ್‌ ಬಾತ್. ಅದ್‌ ಯೊರ್ದನ್‌ ಪೊಳೆಕ್‌ ಆ ಬರಿಲ್‌ ಇಂಜತ್. ಆ ಜಾಗತ್‌ ಯೋಸೇಫ ದುಂಬ ಗೋಳಾಡ್‌ಚಿ. ಅಲ್ಲಿ ಅಯಿಂಗ ಯೋಸೇಫಂಡ ಅಪ್ಪಂಗಾಯಿತ್‌ ಏಳ್‌ ದಿವಸಕತನೆ ದುಃಖತ್‌ಲ್‌ ಇಂಜತ್.

11 ಆಟಾದ್ರ ಕಳತ್‌ಲ್‌ ದುಃಖಪಟ್ಟಂಡುಳ್ಳದ್‌ನ ಆ ದೇಶತ್‌ರ ಜನಳಾನ ಕಾನಾನ್ಯ ಜನ ಕಂಡಿತ್: ಇದ್‌ ಐಗುಪ್ತ ದೇಶತ್‌ರ ಜನಕ್‌ ಬಲ್ಯ ದುಃಚಿಡುವ ಕಾರ್ಯಾಂದ್‌ ಅಯಿಂಗಯಿಂಗಳೇ ತಕ್ಕ್‌ಪರ್‌ಂದಿತ್, ಯೊರ್ದನ್‌ ಪೊಳೆಕ್‌ ಆ ಬರಿಲ್‌ ಉಳ್ಳ ಈ ಜಾಗಕ್‌ ಆಬೇಲ್‌ ಮಿಚ್ರಯಿಮ್‌ ಎಣ್ಣಿಯಂಡ್‌ ಪೆದ ಬೆಚ್ಚತ್.

12 ಇನ್ನನೆ, ಯಾಕೋಬಂಡ ಕ್‌ಣ್ಣ ಮಕ್ಕ ಅಂವೊ ಎಣ್ಣ್‌ನನೆಕೆ ಮಾಡ್‌ಚಿ.

13 ಅಂವೊಂಡ ಚಾವ್‌ ತಡಿನ ಕಾನಾನ್‌ ದೇಶಕ್‌ ಪೊರ್ತ ಪೋಯಿತ್, ಅಬ್ರಹಾಮ, ಮಮ್ರೆಕ್‌ ಕೀಕ್‌ ದಿಕ್‌ಲ್ ಉಳ್ಳ ಮಕ್ಪೇಲ ಎಣ್ಣುವ ಬಾಣೆಲ್‌ ತಾಂಗ್‌ ಸ್ವಂತ ತೂಟ್ಂಗಳ ಬೂಮಿಯಾಯಿತ್‌ ಹಿತ್ತಿಯನಾನ ಎಫ್ರೋನಯಿಂಜ ಕ್ರಯಕ್‌ ಎಡ್‌ತ ಬೂಮಿಲ್‌ ಉಳ್ಳ ಗುವೆಲ್‌ ಅಂವೊನ ಪೂತತ್.

14 ತಾಂಡ ಅಪ್ಪನ ಪೂತ ಪಿಂಞ, ಯೋಸೇಫನ, ಅಂವೊಂಡ ಅಣ್ಣತಮ್ಮಣಂಗ ಪಿಂಞ ಅಂವೊಂಡ ಅಪ್ಪನ ಪೂಪಕ ಅಂವೊಂಡ ಕೂಡೆ ಪೋನ ಎಲ್ಲಾ ಜನಳು ಐಗುಪ್ತ ದೇಶಕ್‌ ತಿರಿತ್‌ ಬಾತ್.


ಯೋಸೇಫ ತಾಂಡ ಅಣ್ಣತಮ್ಮಣಂಗಕ್‌ ಸಮಾದಾನ ಮಾಡ್‌ವದ್‌

15 ಯೋಸೇಫಂಡ ಅಣ್ಣತಮ್ಮಣಂಗ ಅಪ್ಪ ಚತ್ತದ್‌ನ ಕಂಡಿತ್: ಒರ್‌ ಸಮಯ ನಂಗ ಅಂವೊಂಗ್‌ ಮಾಡ್‌ನ ಕ್‍ೕಡ್‌ಕೆಲ್ಲ, ಇಕ್ಕ ಯೋಸೇಫ ನಂಗಳ ದ್ವೇಶ ಮಾಡಿತ್, ನಂಗಳ ಪಗೆ ತ್‍ೕಪಾಂದ್‌ ಅಯಿಂಗಯಿಂಗಳೇ ತಕ್ಕ್‌ ಪರ್‌ಂದಂಡತ್.

16-17 ಅಯಿಂಗ ಯೋಸೇಫಂಗ್: ನೀಡ ಅಣ್ಣಂಗ ಮಾಡ್‌ನ ಕ್‍ೕಡ್‌ನ ಪಿಂಞ ಪಾಪತ್‌ನ ಮನ್ನಿಚಿಡಂಡೂಂದ್‌ ನೀಡ ಅಪ್ಪ ಚಾವಕ್‌ ಮಿಂಞ ನೀಡ ಪಕ್ಕ ಎಣ್ಣ್‌ವಕ್‌ ಆಜ್ಞೆ ಮಾಡ್‌ಚಿ. ಅದ್ಂಗಾಯಿತ್, ನೀಡ ಅಪ್ಪಂಡ ದೇವಡ ಸೇವಕಂಗಳಾನ ನಂಗ ಮಾಡ್‌ನ ಪಾಪತ್‌ನ ನೀನ್‌ ಮನ್ನಿಚಿಡಂಡೂಂದ್‌ ಎಣ್ಣ್‌ವಕ್‌ ಬೋಡ್‌ಚೀಂದ್‌ ಒರ್‌ ಸುದ್ದಿ ಅಯಿಚತ್. ಯೋಸೇಫ ಈ ಸುದ್ದಿನ ಕ್‍ೕಟಿತ್‌ ಮೊರ್‌ಟತ್.

18 ಅಲ್ಲಿಂಜ ಅಂವೊಂಡ ಅಣ್ಣತಮ್ಮಣಂಗ ಬಂದಿತ್, ಅಂವೊಂಗ್‌ ಅಡ್ಡ ಬುದ್ದಿತ್: ಅದಾ, ನಂಗ ನೀಡ ಅಡಿಯಾಳಂಗಾಂದ್‌ ಎಣ್ಣ್‌ಚಿ.

19 ಆಚೇಂಗಿ ಯೋಸೇಫ ಅಯಿಂಗಳ ನೋಟಿತ್: ನಿಂಗ ಬೊತ್ತತಿ. ನಿಂಗಕ್‌ ದಂಡನೆ ಕೊಡ್‌ಪಕ್‌ ನಾನ್‌ ದೇವನ?

20 ನಿಂಗ ನಾಕ್‍ ಕ್‍ೕಡ್‌ ಮಾಡಂಡೂಂದ್‌ ಗೇನ ಮಾಡಿರ. ಆಚೇಂಗಿ ದೇವ ಇದ್‌ನೆಲ್ಲ ನಲ್ಲಂಗೇ ಮಾಡ್‌ಚಿ. ಇಕ್ಕ ಎಚ್ಚಕೋ ಜನಡ ಜೀವತ್‌ನ ಉಳ್‌ಚಿಡ್‌ವಕ್‌ ನನ್ನ ಈ ಸ್ತಾನಕ್‌ ದೇವ ಕೊಂಡಬಂದಿಯೆ.

21 ಆನಗುಂಡ್‌ ನಿಂಗ ಬೊತ್ತತಿ. ಇಂಞು ಮಿಂಞಕು ನಿಂಗಳ ಪಿಂಞ ನಿಂಗಡ ಮಕ್ಕಳ ನಾನ್‌ ನೋಟಿಯೊವೀಂದ್‌ ಎಣ್ಣಿತ್, ಅಯಿಂಗಳ ಸಮಾದಾನ ಪಡ್‌ತಿತ್, ಕುಶೀಲ್‌ ತಕ್ಕ್‌ ಪರ್ಂದತ್.


ಯೋಸೇಫಂಡ ಚಾವ್‌

22 ಇನ್ನನೆ ಯೋಸೇಫ ಪಿಂಞ ಅಂವೊಂಡ ಅಪ್ಪಂಡ ಮನೆಕಾರ ಐಗುಪ್ತ ದೇಶತ್‌ಲ್‌ ವಾಸಮಾಡ್‌ಚಿ. ಯೋಸೇಫ ನೂಟ್ಯ ಪತ್ತ್‌ ಕಾಲ ಬದ್‌ಕ್‌ಚಿ.

23 ಅಂವೊ ಎಫ್ರಾಯಿಮಂಡ ಮಕ್ಕಳ ಪಿಂಞ ಅಂವೊಂಡ ಮೊಮ್ಮಕ್ಕಳ ಕಂಡತ್. ಪಿಂಞ ಮನಸ್ಸೆರ ಮೋಂವೊನಾನ ಮಾಕೀರಂಡ ಮಕ್ಕಳ ಸಹ ಅಂವೊಂಡ ಮಡ್‌ಲ್‌ ಬೊಳ್‌ಂದತ್. ಅಯಿಂಗಳ ತಾಂಡ ಮೊಣಕಾಲ್‌ರ ಮೇಲೆ ಬುದ್ದೊಕ್‌ ಮಾಡ್‌ಚಿ.

24 ಯೋಸೇಫ ತಾಂಡ ಅಣ್ಣತಮ್ಮಣಂಗಕ್: ನಾನ್‌ ಚಾವಕ್‌ ಉಳ್ಳ. ಆಚೇಂಗಿ ದೇವ ನಿಂಗಳ ಕಾಂಬಕ್‌ ಬಂದಿತ್, ನಿಂಗ ಈ ದೇಶತ್‌ನ ಬುಟ್ಟಿತ್, ದೇವ ಅಬ್ರಹಾಮಂಗ್, ಇಸಾಕಂಗ್‌ ಪಿಂಞ ಯಾಕೋಬಂಗ್‌ ವಾಗ್ದಾನ ಮಾಡ್‌ನ ದೇಶಕ್‌ ಪೋಪಕ್‌ ಮಾಡ್‌ವಾಂದ್‌ ನಿಂಗಕ್‌ ಗೊತ್ತಿರಡ್.

25 ಇದ್‌ಲ್ಲತೆ, ಯೋಸೇಫ ತಾಂಡ ಅಣ್ಣತಮ್ಮಣಂಗಳ ನೋಟಿತ್: ದೇವ ನಿಂಗಳ ಕಾಂಬಕ್‌ ಬಪ್ಪಕ, ನಿಂಗ ನಾಡ ಮೂಳೆಯಳ ಈ ಜಾಗತ್‌ಂಜ ಎಡ್‌ತಂಡ್‌ ಪೋಂಡೂಂದ್‌ ಎಣ್ಣಿತ್‌ ಯೋಸೇಫ ಇಸ್ರಾಯೇಲ್‌ಂಡ ಮಕ್ಕಡಯಿಂಜ ವಾಗ್ದಾನ ಮಾಡ್‌ಚಿಟ್ಟಂಡತ್.

26 ಯೋಸೇಫ ನೂಟ್ಯ ಪತ್ತ್‌ಕಾಲತ್‌ ಚತ್ತ್‌ ಪೋಚಿ. ಅಯಿಂಗ ಅಂವೊಂಡ ಚಾವ್‌ ತಡಿನ ತಯಾರ್‌ ಮಾಡಿತ್‌ ಐಗುಪ್ತ ದೇಶತ್‌ಲ್‌ ಒರ್‌ ಪೊಟ್ಟಿರ ಒಳ್‌ಲ್‌ ಬೆಚ್ಚತ್.

© 2017, New Life Literature (NLL)

Lean sinn:



Sanasan