Biblia Todo Logo
Bìoball air-loidhne

- Sanasan -


ಆದ್ಯತ್‌ರ ಪುಸ್ತಕ 49 - ಕೊಡವ ಬೈಬಲ್


ಯಾಕೋಬ ಚಾವಕ್‌ ಮಿಂಞ ತಾಂಡ ಮಕ್ಕಳ ಆಶೀರ್ವಾದ ಮಾಡ್‌ವದ್‌

1 ಯಾಕೋಬ ತಾಂಡ ಎಲ್ಲಾ ಮಕ್ಕಳ ಕಾಕಿತ್: ನಿಂಗೆಲ್ಲಾರು ಒಕ್ಕಚೆ ಕೂಡಿ ಬಾರಿ. ಮಿಂಞತ ದಿವಸತ್‌ಲ್‌ ಎಂತ ಆಪಾಂದ್‌ ನಾನ್‌ ನಿಂಗಕ್‌ ಎಣ್ಣ್‌ವಿ.

2 ಯಾಕೋಬಂಡ ಮಕ್ಕಳೇ, ಒಕ್ಕಚೆ ಕೂಡಿ ಬಂತ್‌ ಕ್‍ೕಳಿ. ನಿಂಗಡ ಅಪ್ಪನಾನ ಇಸ್ರಾಯೇಲ್‌ ಎಣ್ಣ್‌ವ ತಕ್ಕ್‌ಕ್‌ ಕೆಮಿ ಕೊಡಿ.

3 ರೂಬೇನನೇ, ನೀನ್‌ ನಾಡ ಆದ್ಯ ಮೋಂವೊ, ನಾಡ ಶಕ್ತಿರ ಪಿಂಞ ನಾನ್‌ ಬಾಲೆಕಾರನಾಯಿತ್‌ಪ್ಪಕ ಪುಟ್ಟ್‌ನ ಆದ್ಯ ಫಲ. ನೀನ್‌ ಸ್ಥಾನತ್‌ಲ್‌ ಪಿಂಞ ಗೌರವತ್‌ಲ್‌ ಮೊದಲೆನೆಯಂವೊ.

4 ಆಚೇಂಗಿ ನೀನ್‌ ನೀರ್‌ರನೆಕೆ ಸ್ತಿರ ಇಲ್ಲೆ. ನೀನ್‌ ನೀಡ ತಮ್ಮಣಂಗಕಿಂಜ ಮುಕ್ಯಂವೊನಾಯಿತ್‌ಪ್ಪುಲೆ. ಎನ್ನಂಗೆಣ್ಣ್‌ಚೇಂಗಿ, ನೀನ್‌ ನಾಡ ಪೊಣ್ಣ್‌ರ ಕೂಡೆ ಬುದ್ದಂಡ್, ನೀಡ ಅಪ್ಪಂಡ ಕಡಿಕೆನ ಅಶುದ್ದ ಮಾಡಿಯ.

5 ಸೀಮೆಯೋನ ಪಿಂಞ ಲೇವಿ ಒರೇ ತರತ್‌ರ ಅಣ್ಣತಮ್ಮಣಂಗ. ಆಚೇಂಗಿ ದಂಡಾಳು ಈಂಗಡ ಆಯುದತ್‌ನ ಹಿಂಸೆ ಮಾಡುವಕೇ ಉಪಯೋಗಿಚಿಡ್‌ವ.

6 ನಾಡ ಆತ್ಮವೇ, ಈಂಗಡ ಕೆಟ್ಟ ಆಲೋಚೆನೆಕ್‌ ಒಳಪಡತೆ . ನಾಡ ಹೃದಯವೇ ಅಯಿಂಗಡ ಕೂಟ್‌ಕ್‌ ಕೂಡತೆ. ಈಂಗ, ಚೆಡಿಲ್‌ ಮನುಷ್ಯಂಗಳ ಕೊಂದಿತ್, ಬರೀ ಕಳಿಕಾಯಿತ್‌ ದುಂಬ ಎತ್ತ್‌ನ ಊನ ಮಾಡ್‌ಚಲ್ಲ.

7 ಅಯಿಂಗಡ ಬಯಂಗರವಾನ ಚೆಡಿಕು, ಅಯಿಂಗಡ ಕ್ರೂರವಾನ ಬಲ್ಯ ಚೆಡಿಕು ಶಾಪ ಬರಡ್, ಅದ್‌ ಬಾರಿ ಕ್ರೂರವಾಯಿತುಂಡ್. ಯಾಕೋಬಂಡ ಕುಲತ್‌ರಯಿಂಗಡಡೆಲ್‌ ಅಯಿಂಗಳ ಬೋರೆ ಬೋರೆ ಮಾಡಿತ್, ಇಸ್ರಾಯೇಲ್‌ ದೇಶತ್‌ಲೆಲ್ಲ ಅಯಿಂಗಡ ಸಂತಾನತ್‌ನ ಚದ್‍ರ್‍ಚಿಡ್‌ವಿ.

8 ಯೆಹೂದನೇ, ನೀಡ ಅಣ್ಣತಮ್ಮಣಂಗ ನಿನ್ನ ಕೊಂಡಾಡುವ. ನೀಡ ಶತ್‌ರುವಳ ನೀನ್‌ ಚೋಪ್‌ಚಿಡ್‌ವಿಯ. ನೀಡ ಅಣ್ಣತಮ್ಮನಂಗ ನೀಕ್‌ ತಾಂದ್‌ ಅಡ್ಡ ಬೂವ.

9 ಯೆಹೂದ, ನಾಡ ಮೋನೇ, ನೀನ್‌ ಗಟ್ಟಿಮುಟ್ಟಾನ ಸಿಂಹ ಕುಟ್ಟಿ ಮಾದ್ರಿ. ಆಹಾರ ತಿಂದಿತ್‌ ಕೆಲ ದುಂಬಿತ್‌ ಬಂದಿತುಳ್ಳಿಯ. ಅಂವೊ ಸಿಂಹತ್‌ರನೆಕೆ ಆರಾಮಾಯಿತ್‌ ನ್‍ೕಟಿಯಂಡ್‌ ಬುದ್ದಂಡುಂಡ್. ಅಂವೊನ ಒಪ್ಪುವಕ್‌ ದಾರ್‌ಕ್‌ ದೈರ್ಯ ಉಂಡ್?

10 ಸಮಾದಾನತ್‌ರ ಆಳುವಿಕೆ ತಪ್ಪಂವೊ ಬಪ್ಪಕತ್ತನೆ, ರಾಜ ಅದಿಕಾರ ಯೆಹೂದನ ಬುಟ್ಟಿತ್‌ ಪೋಪದು ಇಲ್ಲೆ, ಆಳ್‌ವಿಕೆರೆ ಕೋಲ್‌ ಅಂವೊಂಡ ಕಾಲ್‌ನ ಬುಟ್ಟಿತ್‌ ಪೋಪದು ಇಲ್ಲೆ. ದುಂಬ ಜನಾಂಗ ಅಂವೊಂಗ್‌ ಬಗ್ಗಿತ್‌ ನಡ್‌ಪ.

11 ಅಂವೊ ತಾಂಡ ಕತ್ತೆ ಕುಟ್ಟಿನ ದ್ರಾಕ್ಷಿ ಬಳ್ಳಿಕ್‌ ಕೆಟ್ಟ್‌ವ. ಕುದುರೆ ಕುಟ್ಟಿನ ಚೋಂದ ದ್ರಾಕ್ಷಿ ಪಣ್ಣ್‌ ತಪ್ಪ ಚಾಯಿ ಬಳ್ಳಿಕ್‌ ಕೆಟ್ಟ್‌ವ. ಅಂವೊಂಡ ಪಸಲ್‌ ಎಚ್ಚಕ್‌ ಇಪ್ಪ ಎಣ್ಣ್‌ಚೇಂಗಿ, ದ್ರಾಕ್ಷಿ ರಸತ್‌ಲ್‌ ತಾಂಡ ಬಟ್ಟೆನ, ಚೋಂದ ದ್ರಾಕ್ಷಿರಸತ್‌ ತಾಂಡ ಅಂಗಿನ ಒಲಿಪ.

12 ಅಂವೊಂಡ ಕಣ್ಣ್‌ ದ್ರಾಕ್ಷಿರಸತ್‌ಂಜ ಚೋಂದ ರಂಗ್‌ಲು, ಅಂವೊಂಡ ಪಲ್‌ಲ್‌ ಪಾಲ್ಯಿಂಜ ಬೊಳ್‌ತಿತು ಇಪ್ಪ.

13 ಜೆಬುಲೂನ ಕಡಕರೆಲ್‌ ವಾಸ ಮಾಡ್‌ವ; ಅದ್‌ ಹಡ್‍ಗ್‍ ಬಂತ್‌ ನಿಪ್ಪ ಜಾಗವಾಯಿತ್‌ಪ್ಪ. ಅಂವೊಂಡ ಗಡಿ ಚೀದೋನ್‌ಕ್‌ ಮುಟ್ಟುವ.

14 ಇಸ್ಸಕಾರ, ದಂಡ್‌ ಚೀಲತ್‌ರ ಮದ್ಯತ್‌ ಬುದ್ದಂಡುಳ್ಳ ಶಕ್ತಿವುಳ್ಳ ಕತ್ತೆರನೆಕೆ ಇಪ್ಪ.

15 ಅಂವೊ, ಅರಾಮ್‌ಲ್‌ ಇಪ್ಪದ್‌ ನಲ್ಲದ್‍ೕಂದು, ಅಂವೊ ಕೂಡ್‌ನ ನಾಡ್‌ ಸುಕವಾಯಿತ್‌ ಉಂಡ್‍ೕಂದ್‌ ಕಂಡಿತ್‌ ಬಾರತ್‌ನ ಪೊರ್ಪಕ್‌ ತಾಂಡ ಬೆನ್ನ್‌ನ ಬಗ್ಗ್‌ಚಿಟ್ಟಿತ್, ಗುಲಾಮನಾಯಿತ್‌ ಕೆಲಸ ಮಾಡುವ.

16 ದಾನ್‌ ಇಸ್ರಾಯೇಲ್‌ಂಡ ಕುಲತ್‌ಲ್‌ ಒರ್‌ ಕುಲವಾಯಿತ್, ತಾಂಡ ಜನಕ್‌ ನ್ಯಾಯ ತೀರ್‌ಪ್‌ ಮಾಡುವ.

17 ದಾನ್, ಕುದುರೆರೆ ಮೇಲೆ ಪತ್ತಿತುಳ್ಳಂವೊ ಬೆಂಬರಿಕ್‌ ಬೂವನೆಕೆ, ಅದ್‌ಂಡ ಕಾಲ್‌ನ ಕಡಿಪಕಾಯಿತ್‌ ಬಟ್ಟೆಲೆ ಉಳ್ಳ ಪಾಂಬ್ರನೆಕೆಯು, ಪೋಪ ಬಟ್ಟೆರ ಬರಿಲ್‌ ಉಳ್ಳ ಒರ್‌ ವಿಷವುಳ್ಳ ಪಾಂಬ್ರನೆಕೆಯು ಇಪ್ಪ.

18 ಯೆಹೋವನೇ, ನಾನ್‌ ನೀಡ ರಕ್ಷಣೆಕಾಯಿತ್‌ ಪಾರಕಾತಂಡುಳ್ಳ.

19 ಗಾದನ ಎಣ್ಣುವಂವೊಂಡ ಮೇಲೆ ಒರ್‌ ಕೊಳ್ಳೆ ಕೂಟ ಬಂದಿತ್‌ ಆಕ್ರಮಣ ಮಾಡ್‌ವ. ಆಚೇಂಗಿ ಕಡೇಕ್‌ ಅಯಿಂಗ ತಿರಿತ್‌ ಬಪ್ಪಕ ಗಾದನ ಅಯಿಂಗಳ ಚೋಪ್‌ಚಿಡ್‌ವ.

20 ಆಶೇರಂಡ ಬೂಮಿಲ್‌ ದುಂಬ ನಲ್ಲ ದಾನ್ಯ ಬೊಳೆಯುವ. ರಾಜಂಗಕ್‌ ಬೋಂಡಿಯಾನ ಆಹಾರ ವಸ್ತು ಅಂವೊಂಡ ಪಕ್ಕ ಕ್‌ಟ್ಟುವ.

21 ನಪ್ತಾಲಿ ಸ್ವಾತಂತ್‌ರವಾಯಿತ್‌ ಓಡುವ ಜಿಂಕೆರನೆಕೆ. ಅಂವೊ ರಸತ್‌ಲ್‌ ತಕ್ಕ್‌ ಪರಿಯುವ.

22 ಯೋಸೇಫ ಫಲ ತಪ್ಪ ಒರ್‌ ಗಿಡತ್‌ರನೆಕೆ. ಅಂವೊ ಬುಗ್ಗೆರ ಪಕ್ಕ ಉಳ್ಳ ನಲ್ಲ ಫಲ ತಪ್ಪ ಗಿಡ. ಅದ್‌ಂಡ ಕೊಂಬ್ ಗೋಡೆರ ಮೇಲೆ ಪಬ್ಬುವ.

23 ಬಿಲ್ಲ್‌ಗಾರಂಗ ಅಂವೊನ ದುಂಬ ದುಃಖ ಪಡ್‌ತ್‌ಚಿ, ಅಂವೊಂಡ ಮೇಲೆ ಬಾಣ ಬುಟ್ಟಿತ್, ಅಂವೊನ ದ್ವೇಶ ಮಾಡ್‌ಚಿ.

24 ಆಚೇಂಗಿಯು ಅಂವೊಂಡ ಬಿಲ್‌ಲ್‌ ದೃಡವಾಯಿತ್‌ ನಿಂದತ್. ಅಂವೊಂಡ ಪುಜ ಕೊರಿಕಾಪಂವೊ ಪಿಂಞ ಇಸ್ರಾಯೇಲ್‌ರ ಕಲ್‌ಲ್‌ ಬಂಡೇಂದ್‌ ಪೆದ ಉಳ್ಳಂವೊನ ಆರಾದನೆ ಮಾಡುವ ಯಾಕೋಬನಂಡ ಶಕ್ತಿವಂತಂವೊಂಡ ಕೈಯಿಂಜ ಬಲಪಟ್ಟತ್.

25 ನೀಡ ಅಪ್ಪಂಡ ದೇವ ನೀಕ್‌ ಸಹಾಯ ಮಾಡ್‌ವ. ಸರ್ವಶಕ್ತಿವಂತಂವೊನಾನ ದೇವ ನೀಕ್‌ ಆಶೀರ್ವಾದ ಮಾಡಡ್. ಅಂವೊ, ಕೊಡಿಲ್‌ ಸ್ವರ್‌ಗತ್‌ರ ಆಶೀರ್ವಾದತ್‌ಂಜಲೂ, ಅಡಿಲ್‌ ಬೂಮಿರ ಆಳತ್‌ಂಜ ಬಪ್ಪ ಆಶೀರ್ವಾದತ್‌ಂಜಲೂ, ಮೊಳೆ ಪಿಂಞ ಗರ್ಬತ್‌ಂಜ ಉಂಟಾಪ ಎಲ್ಲಾ ಆಶೀರ್ವಾದತ್‌ಂಜಲೂ ನಿನ್ನ ಆಶೀರ್ವಾದ ಮಾಡ್‌ವ.

26 ನೀಡ ಅಪ್ಪಂಡ ಆಶೀರ್ವಾದ ಬಲ್ಯದ್, ನೀಡ ಅಪ್ಪಂಡ ಆಶೀರ್ವಾದ ನಾಡ ಮುತ್ತಜ್ಜಂಗಡ ಆಶೀರ್ವಾದಕಿಂಜ ಬಲ್ಯದ್. ಕಾಲಕಾಲಕು ಇಪ್ಪ ಪರ್ವತತಿಂಜ್ ಬಪ್ಪ ಆಶೀರ್ವಾದಕ್ಕಿಂಜ ಬಲ್ಯದ್. ಈ ಎಲ್ಲಾ ಆಶೀರ್ವಾದ ತಾಂಡ ಅಣ್ಣತಮ್ಮಣಂಗಕಿಂಜ ವಿಶೇಷವಾಯಿತುಳ್ಳ ರಾಜಕುಮಾರನಾನ ಯೋಸೇಫಂಡ ಮಂಡೆರ ಮೇಲೆ ಇರಡ್.

27 ಬೆನ್ಯಾಮೀನ ತಿಂಬಕಾಯಿತ್‌ ಮೃಗತ್‌ನ ಪುಡಿಪ ತೋಳರನಕೆ. ಪೊಲಾಕ ಪ್ರಾಣಿಯಳ ಪುಡ್‌ಚಿತ್‌ ತಿಂಬ. ಬಯಿಟಾಪಕ, ಮಿಕ್ಕನದ್‌ನ ಬಾಗ ಮಾಡ್‌ವಾಂದ್‌ ಎಣ್ಣ್‌ಚಿ.

28 ಈಂಗೆಲ್ಲಾರು ಇಸ್ರಾಯೇಲ್‌ರಗೊಂಡ್‌ ಪುಟ್ಟ್‌ನ ಪನ್ನೆರಂಡ್‌ ಕುಲಕ್‌ ಕೂಡ್‌ನಯಿಂಗ. ಅಯಿಂಗಡ ಅಪ್ಪ ಅಯಿಂಗಕ್‌ ಆಶೀರ್ವಾದ ಮಾಡ್‌ವಕ ಅಯಿಂಗಕ್‌ ಎಣ್ಣ್‌ನದ್‌ ಇದೇ: ಅಯಿಂಗಯಿಂಗಕ್‌ ಸೆರಿಯಾಯಿತ್‌ ಆಶೀರ್ವಾದತ್‌ನ ಮಾಡಿಯೆ.


ಇಸ್ರಾಯೇಲ್‌ಂಡ ಚಾವ್‌

29 ಇಂಞು ಅಂವೊ ಅಯಿಂಗಳ ನೋಟಿತ್: ನಾನ್‌ ನಾಡ ಜನತ್‌ರ ಕೂಡೆ ಕೂಡ್‌ವ ಕಾಲ ಪಕ್ಕ ಬಂದಿತ್. ಹಿತ್ತಿಯನಾನ ಎಫ್ರೋನಂಡ ಬೂಮಿಲ್‌ ಉಳ್ಳ ಗುವೆರ ಒಳ್‌ಲ್‌ ನಾಡ ಅಪ್ಪ ಪಿಂಞ ಅಜ್ಜಂಗಡ ಕೂಟ್ಟ್‌ಲ್ ಬೂಕಂಡು.

30 ಆ ಗುವೆ ಕಾನಾನ್‌ ದೇಶತ್‌ರ ಮಮ್ರೆಕ್‌ ಮಿಂಞಲ್‌ ಉಳ್ಳ ಮಕ್ಪೇಲ ಎಣ್ಣ್‌ವ ಬಾಣೆಲ್‌ ಉಂಡ್. ಅದ್‌ನ ಅದ್‌ಂಡ ಸುತ್ತ್‌ಲ್‌ ಉಳ್ಳ ಬೂಮಿನೆಲ್ಲಾ ಅಬ್ರಹಾಮ ಹಿತ್ತಿಯನಾನ ಎಫ್ರೋನಂಡ ಕೈಯಿಂಜ ಸ್ವಂತ ಬೂಮಿ ಆಪನೆಕೆ ಚತ್ತಯಿಂಗಳ ಪೂಪಕಾಯಿತ್‌ ಎಡ್‌ತ್ತಂಡತ್.

31 ಅಲ್ಲಿ ಅಬ್ರಹಾಮನ ಪಿಂಞ ಅಂವೊಂಡ ಪೊಣ್ಣ್‌ ಆನ ಸಾರಳ ಪೂತತ್. ಅಲ್ಲೇ ಇಸಾಕನ ಪಿಂಞ ಅಂವೊಂಡ ಪೊಣ್ಣ್‌ ಆನ ರೆಬೆಕ್ಕಳ ಪೂತತ್. ಅಲ್ಲೆಯೇ ಲೇಯಳ ನಾನ್‌ ಪೂತ.

32 ಅದೇ ಬೂಮಿನ ಪಿಂಞ ಗುವೆನ ನಾಡ ಅಜ್ಜ ಅಬ್ರಹಾಮ ಹಿತ್ತೀಯಂಡ ಕೈಯಿಂಜ ಕ್ರಯಕ್‌ ಎಡ್‌ತ್‍ೕಂದ್‌ ಎಣ್ಣ್‌ಚಿ.

33 ಯಾಕೋಬ ತಾಂಡ ಮಕ್ಕಕ್‌ ಆಜ್ಞೆ ಮಾಡ್‌ನ ಪಿಂಞ ಕಟ್ಟ್‌ರ ಮೇಲೆ ಬುದ್ದಂಡ್‌ ಕೊನೆ ಉಸ್‌ರ್‌ ಬುಟ್ಟಿತ್‌ ಚತ್ತ್‌ ಪೋಚಿ.

© 2017, New Life Literature (NLL)

Lean sinn:



Sanasan