Biblia Todo Logo
Bìoball air-loidhne

- Sanasan -


ಆದ್ಯತ್‌ರ ಪುಸ್ತಕ 45 - ಕೊಡವ ಬೈಬಲ್


ಯೋಸೇಫ ಅಂವೊ ದಾರ್‌ಂದ್‌ ಎಲ್ಲಾರ್‌ಕು ಅರಿಯಿಚ್ಚಿಟ್ಟದ್‌

1 ಇದೆಲ್ಲಾನ ಕ್‍ೕಟ ಪಿಂಞ ಯೋಸೇಫಂಗ್‌ ಎಲ್ಲಾ ಸೇವಕಂಗಡ ಮಿಂಞ ದುಃಖ ತಡ್‌ಪಕ್‌ ಕಯ್ಯತೆ ಎಲ್ಲಾರು ನನ್ನ ಬುಟ್ಟಿತ್‌ ಪೋಪನೆಕೆ ಮಾಡೀಂದ್‌ ಆಜ್ಞೆ ಮಾಡ್‌ಚಿ. ಯೋಸೇಫ ಅಂವೊಂಡ ಅಣ್ಣಂಗಕ್‌ ಅಂವೊ ದಾರ್‌ಂದ್‌ ಎಣ್ಣುವಕ ಅಲ್ಲಿ ಬೋರೆ ದಾರು ಇಂಜಿತ್‌ಲ್ಲೆ.

2 ಅಲ್ಲಿಂಜ ಅಂವೊ ಜೋರಾಯಿತ್‌ ಮೊರ್‌ಟತ್. ಅಂವೊ ಮೊರ್‌ಡ್‌ವದ್‌ ಐಗುಪ್ತ ಜನಕ್‌ ಕ್‍ೕಟತ್. ಈ ಸುದ್ದಿ ಫರೋಹನಂಡ ಮನೆಕಾರಂಗಕು ಎತ್ತ್‌ಚಿ.

3 ಅಂವೊ ತಾಂಡ ಅಣ್ಣಂಗಕ್: ನಾನ್‌ ಯೋಸೇಫ. ನಾಡ ಅಪ್ಪ ಇಂಞು ಬದ್‌ಕಿತುಂಡಾಂದ್‌ ಕ್‍ೕಟತ್. ಯೋಸೇಫ ಅಯಿಂಗಡ ಮಿಂಞತ್‌ ನಿಂದಿತುಳ್ಳಂಗ್‌ ಬೊತ್ತಿಪೋಯಿತ್‌ಂಜ ಅಯಿಂಗಕ್, ಎಂತ ತಕ್ಕ್‌ ಪರಿಯಂಡೂಂದ್‌ ಗೊತ್ತಾಯಿತ್‌ಲ್ಲೆ.

4 ಅಕ್ಕ ಯೋಸೇಫ ತಾಂಡ ಅಣ್ಣತಮ್ಮಣಂಗಳ ನೋಟಿತ್: ನಾಡ ಪಕ್ಕ ಬಾರೀಂದ್‌ ಅಯಿಂಗಳ ಕಾಕ್‌ವಕ ಅಯಿಂಗ ಪಕ್ಕ ಬಾತ್. ಅಕ್ಕ ಅಂವೊ: ನಿಂಗ ಐಗುಪ್ತ ದೇಶಕ್‌ ಪೋಪಯಿಂಗಡ ಪಕ್ಕ ಮಾರ್‌ನ ನಿಂಗಡ ತಮ್ಮಣ ಆನ ಯೋಸೇಫ ನಾನೇ.

5 ಆಚೇಂಗಿ ನಿಂಗ ಈ ವಿಷಯತ್‌ ಮಂಡೆ ಕೆಡ್‌ತಿಯೊತಿ, ನನ್ನ ಇಲ್ಲಿಕ್‌ ಮಾರ್‌ನಂಗ್‌ ನಿಂಗಡ ಮೇಲೆ ನಿಂಗ ಚೆಡಿಮಾಡಿಯೊತಿ. ಎನ್ನಂಗೆಣ್ಣ್‌ಚೇಂಗಿ ದೇವನೇ ನಂಗಡ ಜನಡ ಜೀವತ್‌ನ ಕಾಪಾಡ್‌ವಕಾಯಿತ್‌ ನಿಂಗಕಿಂಜ ಮಿಂಞ ನನ್ನ ಅಯಿಚಿಯೆ.

6 ದೇಶತ್‌ಲ್‌ ಬರಗಾಲ ಬಂತ್‌ ದಂಡ್‌ ಕಾಲ ಆಚಿ. ಇಂಞು ಅಂಜ್ ಕಾಲಕ್‌ ಬೇಲ್‌ ಉಪ್ಪೋ ಪಣಿಯು ಇಪ್ಪುಲೆ ಕೊಯ್ಯಿ ಪಣಿಯು ಇಪ್ಪುಲೆ.

7 ಬೂಮಿರ ಮೇಲೆ ನಿಂಗಡ ವಂಶತ್‌ನ ಪಾಳಾಕತೆ ಬಲ್ಯ ಜನಾಂಗಳಾಯಿತ್‌ ಮಾಡ್‌ವಕು, ಬಲ್ಯ ಅಪಾಯತ್‌ಂಜ ನಿಂಗಳ ಕಾಪಾಡುವಕು, ದೇವ ನನ್ನ ನಿಂಗಕಿಂಜ ಮಿಂಞ ಇಲ್ಲಿಕ್‌ ಅಯಿಚತ್.

8 ಆನಗುಂಡ್‌ ಇದ್‌ ನಿಂಗಡ ಕೆಲಸ ಅಲ್ಲ, ದೇವನೇ ನನ್ನ ಇಲ್ಲಿಕ್‌ ಅಯಿಚಿತ್, ನನ್ನ ಫರೋಹನಂಗ್‌ ಆಲೋಚನೆ ಕೊಡ್‌ಪಂವೊನಾಯಿತು, ಅಂವೊಂಡ ಅರಮನೆರ ಕಾರ್ಯಾಕಾರನಾಯಿತು, ಐಗುಪ್ತ ದೇಶತ್‌ರ ಅದಿಪತಿಯಾಯಿತು ನನ್ನ ಮಾಡ್‌ಚಿ.

9 ನಿಂಗ ಬೆರಿಯ ನಾಡ ಅಪ್ಪಂಡ ಪಕ್ಕ ಪೋಯಿತ್: ದೇವ ನನ್ನ ಇಡೀ ಐಗುಪ್ತ ದೇಶಕ್‌ ಅದಿಪತಿಯಾಯಿತ್‌ ಮಾಡಿತ್. ತಡೆಮಾಡತೆ ನೀನ್‌ ಇಕ್ಕಲೆ ನಾಡ ಪಕ್ಕ ಬಾ.

10 ನೀನ್, ನೀಡ ಮಕ್ಕ, ಕ್‌ರ್‌ಮಕ್ಕ, ಎತ್ತ್‌ಕಡ್‌ಚಿಯ, ಕೊರಿಯ ಪಿಂಞ ನೀಡ ಪಕ್ಕ ಉಳ್ಳ ಎಲ್ಲಾಂಡ ಕೂಡೆ ಗೋಷೆನ್‌ ನಾಡ್‌ಲ್‌ ವಾಸಮಾಡಿತ್‌ ನಾಡ ಪಕ್ಕ ಇರಲು.

11 ನೀಕು ನೀಡ ಮನೆಕಾರಕು ಪಿಂಞ ನೀಕ್‌ ಉಳ್ಳ ಎಲ್ಲಾಂಗು ಬಡತನ ಬಕ್ಕತನೆಕೆ ನಾನ್‌ ನಿಂಗಳ ನೋಟಿಯೊವಿ. ಇಂಞು ಅಂಜ್ ಕಾಲ ಈ ಬರಗಾಲ ಇಪ್ಪಾಂದ್, ನೀಡ ಮೋಂವೊನಾನ ಯೋಸೇಫ ನೀಡ ಪಕ್ಕ ಎಣ್ಣುವಕ್‌ ಎಣ್ಣ್‌ಚೀಂದ್‌ ಎಣ್ಣಿ.

12 ಇದಾ, ನಾನೇ ನಿಂಗಡ ಕೂಡೆ ತಕ್ಕ್‌ ಪರ್‌ಂದಂಡುಳ್ಳಂದ್‌ ನಿಂಗಳು, ನಾಡ ತಮ್ಮಣ ಆನ ಬೆನ್ಯಾಮೀನು ಅದನ ಕಂಡಂಡುಂಡ್.

13 ನಾಕ್‍ ಇಲ್ಲಿ ಎಚ್ಚಕ್‌ ಗೌರವ ಉಂಡ್‍ೕಂದ್‌ ಪಿಂಞ ನಿಂಗ ಇಲ್ಲಿ ಕಂಡದ್‌ ಎಲ್ಲಾನ ನಾಡ ಅಪ್ಪಂಗ್‌ ಎಣ್ಣಿತ್, ಅಂವೊನ ಬೆರಿಯ ನಾಡ ಪಕ್ಕ ಕಾಕಿಯಂಡ್‌ ಬಾರೀಂದ್‌ ಎಣ್ಣಿತ್,

14 ತಾಂಡ ತಮ್ಮಣ ಆನ ಬೆನ್ಯಾಮೀನನ ತಬ್ಬಿಯಂಡ್‌ ಕುಶೀಲ್‌ ಮೊರ್‌ಟತ್. ಬೆನ್ಯಾಮೀನನು ಯೋಸೇಫನ ತಬ್ಬಿಯಂಡ್‌ ಮೊರ್‌ಟತ್.

15 ಪಿಂಞ ಯೋಸೇಫ ಪ್ರತಿಯೊರ್‌ ಅಣ್ಣಂಗ್‌ ಮುತ್ತ್‌ ಕೊಡ್‌ತಿತ್‌ ಅಯಿಂಗಳ ಸಹ ತಬ್ಬಿಯಂಡ್‌ ಮೊರ್‌ಟತ್. ಅಲ್ಲಿಂಜ ಯೋಸೇಫಂಡ ಅಣ್ಣಂಗ ಅಂವೊಂಡ ಕೂಡೆ ಚಾಯಿತೆ ತಕ್ಕ್‌ ಪರ್ಂದತ್.

16 ಯೋಸೇಫಂಡ ಅಣ್ಣತಮ್ಮಣಂಗ ಬಂದ ಸುದ್ದಿ ಫರೋಹನಂಡ ಅರಮನೆಕ್‌ ಗೊತ್ತಾಪಕ, ಫರೋಹನನು ಅಂವೊಂಡ ಅದಿಕಾರಿಯಳು ದುಂಬ ಕುಶಿಪಟ್ಟತ್.

17 ಫರೋಹನ ಯೋಸೇಫನ ನೋಟಿತ್: ನೀನ್‌ ನೀಡ ಅಣ್ಣತಮ್ಮಣಂಗಕ್‌ ಎಣ್ಣುವಕುಳ್ಳದ್‌ ಎಂತ ಎಣ್ಣ್‌ಚೇಂಗಿ: ನಿಂಗಡ ಕತ್ತೆರ ಮೇಲೆ ಮೂಟೆ ಕೆಟ್ಟಿತ್‌ ಬೆರಿಯ ಕಾನಾನ್‌ ದೇಶಕ್‌ ಪೋಯಿತ್,

18 ನಿಂಗಡ ಅಪ್ಪನ ಪಿಂಞ ಮನೆಕಾರಳ ಕಾಕಿಯಂಡ್‌ ನಾಡ ಪಕ್ಕ ಐಗುಪ್ತ ದೇಶಕ್‌ ತಿರಿತ್‌ ಬಾರಿ. ನಾನ್‌ ನಿಂಗಕ್‌ ಐಗುಪ್ತ ದೇಶತ್‌ಲ್‌ ಉಳ್ಳ ನಲ್ಲ ಜಾಗತ್‌ನ ತಪ್ಪಿ. ಈ ದೇಶತ್‌ರ ದಾರಳವಾನ ಬೂಮಿರ ಬೊಳೆನ ನಿಂಗ ಅನುಬವಿಚಿಡಲು.

19 ನಿಂಗ ನಿಂಗಡ ಪೊಣ್ಣ್‌ ಮಕ್ಕಕಾಯಿತ್, ಐಗುಪ್ತ ದೇಶತ್‌ಂಜ ಎತ್ತ್‌ ಗಾಡಿನ ಎಡ್‌ತಂಡ್‌ ಪೋಯಿತ್‌ ಅಯಿಂಗಳ ಸಹ ನಿಂಗಡ ಅಪ್ಪಂಡ ಕೂಡೆ ಕಾಕಿಯಂಡ್‌ ಬಾರಿ.

20 ನಿಂಗಡ ಸ್ವಂತ ಸಾಮಾನ್ನ ಬುಟ್ಟಿತ್‌ ಬಪ್ಪ ವಿಷಯತ್‌ಲ್‌ ಬೇಜಾರ್‌ ಮಾಡತಿ. ಎನ್ನಂಗೆಣ್ಣ್‌ಚೇಂಗಿ ಐಗುಪ್ತ ದೇಶತ್‌ಲ್‌ ಉಳ್ಳ ಎಲ್ಲಾ ನಲ್ಲ ವಸ್ತು ನಿಂಗಡದಾಯಿತ್‌ ಇಪ್ಪಾಂದ್‌ ಅಯಿಂಗಕ್‌ ಎಣ್ಣ್‍ೕಂದ್‌ ಎಣ್ಣಿತ್, ನಾನ್‌ ನೀಕ್‌ ಆಜ್ಞೆ ಮಾಡ್‌ನನೆಕೆ ಮಾಡ್‍ೕಂದ್‌ ಎಣ್ಣ್‌ಚಿ.

21 ಇಸ್ರಾಯೇಲ್‌ಂಡ ಮಕ್ಕ ಅನ್ನನೆ ಮಾಡ್‌ಚಿ. ಯೋಸೇಫ ಫರೋಹನಂಡ ಆಜ್ಞೆರನೆಕೆ ಅಯಿಂಗಕ್‌ ಎತ್ತ್‌ ಗಾಡಿನ ಮಾತ್‌ರ ಅಲ್ಲತೆ, ಪ್ರಯಾಣಕ್‌ ಬೋಂಡಿಯಾನ ಆಹಾರತ್‌ನ,

22 ಅಯಿಂಗ ಒಬ್ಬೊಬ್ಬಂಗಕು ಬಟ್ಟೆ ಬದ್‌ಲ್‌ ಮಾಡುವಕ್‌ ಪುದಿಯ ಬಟ್ಟೆನ ಸಹ ಕೊಡ್‌ತತ್. ಆಚೇಂಗಿ ಬೆನ್ಯಾಮೀನಂಗ್‌ ಮುನ್ನೂರ್‌ ಬೊಳ್ಳಿ ನಾಣ್ಯತ್‌ನ ಪಿಂಞ ಬಟ್ಟೆ ಬದ್‌ಲ್‌ ಮಾಡ್‌ವಕ್‌ ಅಂಜ್ ಪುದಿಯ ಬಟ್ಟೆನ ಕೊಡ್‌ತತ್.

23 ಅನ್ನನೆ ತಾಂಡ ಅಪ್ಪಂಗ್‌ ಪತ್ತ್‌ ಕತ್ತೆಯಡ ಮೇಲೆ ಇಡೀ ಐಗುಪ್ತ ದೇಶತ್‌ಲ್‌ ಕ್‌ಟ್ಟ್‌ವ ನಲ್ಲ ವಸ್ತುನ ಪಿಂಞ ಇಂಞು ಪತ್ತ್‌ ಕತ್ತೆಯಡ ಮೇಲೆ ತಾಂಡ ಅಪ್ಪಂಗ್‌ ಪ್ರಯಾಣ ಸಮಯತ್‌ ಬೋಂಡಿಯಾನ ಆಹಾರ ದಾನ್ಯ, ಒಟ್ಟಿ ಪಿಂಞ ತಿಂಬಕ್‌ ಬೋಂಡಿಯಾನ ಆಹಾರತ್‌ನ ಕೆಟ್ಟಿ ಕೊಡ್‌ತತ್.

24 ಅನ್ನನೆ ಅಂವೊಂಡ ಅಣ್ಣತಮ್ಮಣಂಗಕ್: ನಿಂಗ ಬಟ್ಟೆಲ್‌ ಜಗಳ ಮಾಡತೀಂದ್‌ ಎಣ್ಣಿತ್‌ ಅಯಿಚತ್. ಅಯಿಂಗ ಪೊರ್‌ಟ್ ಪೋಚಿ.

25 ಅಯಿಂಗ ಐಗುಪ್ತ ದೇಶತ್‌ನ ಬುಟ್ಟಿತ್‌ ಕಾನಾನ್‌ ದೇಶತ್‌ಲ್‌ ವಾಸ ಮಾಡಿಯಂಡಿಂಜ ಅಯಿಂಗಡ ಅಪ್ಪನಾನ ಯಾಕೋಬಂಡ ಪಕ್ಕ ಬಾತ್.

26 ಅಯಿಂಗ ಅಂವೊಂಗ್: ಯೋಸೇಫ ಇಂಞು ಬದ್‌ಕಿಯಂಡುಂಡ್. ಅಂವೊ ಐಗುಪ್ತ ದೇಶತ್‌ರ ಅದಿಪತಿಯಾಯಿತ್‌ ಉಂಡ್‍ೕಂದ್‌ ಎಣ್ಣ್‌ಚಿ. ಇದ್‌ನ ಕ್‍ೕಟಿತ್‌ ಯಾಕೋಬ ದಂಗಾಚಿ. ಅಂವೊಂಗ್‌ ನಂಬ್‌ವಕ್‌ ಕಯಿಂಜಿತ್‌ಲ್ಲೆ.

27 ಅಲ್ಲಿಂಜ ಅಯಿಂಗ ಯೋಸೇಫ ಎಣ್ಣಿತ್‌ ಅಯಿಚ ತಕ್ಕ್‌ನೆಲ್ಲ ಎಣ್ಣಿತ್‌ ತಾಂಡ ಪ್ರಯಾಣಕ್‌ ಎತ್ತ್‌ ಗಾಡಿನ ಅಯಿಚನ ಕಂಡಿತ್‌ ಅಯಿಂಗಡ ಅಪ್ಪ ಯಾಕೋಬಂಡ ಆತ್ಮಮಕ್‌ ಪುದಿಯ ಜೀವ ಕ್‌ಟ್ಟನನೆಕೆ ಆಚಿ.

28 ಅಕ್ಕ ಇಸ್ರಾಯೇಲ್: ನಾಡ ಮೋಂವೊನಾನ ಯೋಸೇಫ ಇಂಞು ಬದ್‌ಕಿಯಂಡುಂಡಲ್ಲಾ, ಇದ್‌ ಮದಿ ನಾಕ್; ನಾನ್‌ ಚಾವಕ್‌ ಮಿಂಞ ಅಂವೊನ ಪೋಯಿತ್‌ ಕಾಂಬೀಂದ್‌ ಎಣ್ಣ್‌ಚಿ.

© 2017, New Life Literature (NLL)

Lean sinn:



Sanasan