Biblia Todo Logo
Bìoball air-loidhne

- Sanasan -


ಆದ್ಯತ್‌ರ ಪುಸ್ತಕ 43 - ಕೊಡವ ಬೈಬಲ್


ಯೋಸೇಫಂಡ ಅಣ್ಣತಮ್ಮಣಂಗ ದಂಡನೆ ಕುರಿ ಐಗುಪ್ತ ದೇಶಕ್‌ ಪೋಪದ್‌

1 ಕಾನಾನ್‌ ದೇಶತ್‌ಲ್‌ ಬರಗಾಲ ಕಠಿಣವಾಯಿತ್‌ಂಜತ್.

2 ಅಯಿಂಗ ಐಗುಪ್ತ ದೇಶತ್‌ಂಜ ಕೊಂಡಬಂದ ಆಹಾರ ದಾನ್ಯ ತ್‍ೕಂದ್‌ ಪೋಪಕಾಪಕ ಅಯಿಂಗಡ ಅಪ್ಪ ಅಯಿಂಗಳ ನೋಟಿತ್: ನಿಂಗ ತಿರಿತ್‌ ಪೋಯಿತ್‌ ಇಂಞು ಚೆನ್ನ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತ ಬಾರೀಂದ್‌ ಎಣ್ಣ್‌ಚಿ.

3 ಅದ್‌ಂಗ್‌ ಯೆಹೂದ: ಆ ಮನುಷ್ಯ ನಿಂಗ ನಿಂಗಡ ತಮ್ಮಣನ ನಿಂಗಡ ಕೂಡೆ ಕಾಕಿಯಂಡ್‌ ಬಕ್ಕತೆ ಪೋಚೇಂಗಿ ನಿಂಗ ನಾಡ ಮೂಡ್‌ನ ನೋಟ್‌ವಕ್ಕಾಗಾಂದ್‌ ನಂಗಕ್‌ ಎಚ್ಚರಿಕೆ ಕೊಡ್‌ತಿತ್‌ ಅಯಿಚತ್.

4 ನಂಗಡ ತಮ್ಮಣನ ನಂಗಡ ಕೂಡೆ ಅಯಿಚತೇಂಗಿ ನಂಗ ಪೋಯಿತ್‌ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತಂಡ್‌ ಬಪ್ಪಾಂದ್‌ ಎಣ್ಣ್‌ಚಿ.

5 ಅನ್ನನೆ ಅಂವೊನ ನಂಗಡ ಕೂಡೆ ಅಯಿಕತೆ ಪೋಚೇಂಗಿ, ನಂಗ ಅಲ್ಲಿಕ್‌ ಪೋಪುಲೆ. ಎನ್ನಂಗೆಣ್ಣ್‌ಚೇಂಗಿ: ನಿಂಗ ನಿಂಗಡ ತಮ್ಮಣನ ನಿಂಗಡ ಕೂಡೆ ಕಾಕಿಯಂಡ್‌ ಬಕ್ಕತೆ ಪೋಚೇಂಗಿ ನಿಂಗ ನಾಡ ಮೂಡ್‌ನ ನೋಟ್‌ವಕ್ಕಾಗಾಂದ್‌ ಆ ಮನುಷ್ಯ ನಂಗಕ್‌ ಎಣ್ಣಿತ್‌ ಅಯಿಚಿತ್‍ೕಂದ್‌ ಎಣ್ಣ್‌ಚಿ.

6 ಅದ್‌ಂಗ್‌ ಇಸ್ರಾಯೇಲ: ನಿಂಗಕ್‌ ಇಂಞೊರ್‌ ತಮ್ಮಣ ಉಂಡ್‍ೕಂದ್‌ ಆ ಮನುಷ್ಯಂಗ್‌ ಎಣ್ಣಿತ್, ಎನ್ನಂಗ್‌ ನಾಕ್‍ ಈ ತೊಂದರೆನ ಎಡ್‌ತಂಡ್‌ ಬಂದಿತುಳ್ಳಿರಾಂದ್‌ ಎಣ್ಣ್‌ಚಿ.

7 ಅದ್‌ಂಗ್‌ ಅಯಿಂಗ: ಆ ಮನುಷ್ಯ ನಿಂಗಡ ಅಪ್ಪ ಇಂಞು ಬದ್‌ಕಿತುಂಡಾ? ನಿಂಗಕ್‌ ಇಂಞೊರ್‌ ತಮ್ಮಣ ಉಂಡಾ? ಎಣ್ಣಿಯಂಡ್‌ ನಂಗಡ ಕುಟುಂಬತ್‌ರ ವಿಷಯತ್‌ ದುಂಬ ಪ್ರಶ್ನೆ ಇಟ್ಟತ್. ನಂಗ ಅಂವೊಂಡ ಪ್ರಶ್ನೆಕ್‌ ಉತ್ತರ ಕೊಡ್‌ತ್ತತ್. ನಿಂಗಡ ತಮ್ಮಣನ ಕಾಕಿಯಂಡ್‌ ಬಾರೀಂದ್‌ ಅಂವೊ ಎಣ್ಣ್‌ವಾಂದ್‌ ನಂಗಕ್‌ ಗೊತ್ತಿಂಜ್‌ತ್ತ್‌ಲೇಂದ್‌ ಎಣ್ಣ್‌ಚಿ.

8 ಇಂಞು, ಯೆಹೂದ ತಾಂಡ ಅಪ್ಪನಾನ ಇಸ್ರಾಯೇಲನ ನೋಟಿತ್: ನೀನ್, ನಂಗ ಪಿಂಞ ನಂಗಡ ಚುಮ್ಮಿ ಮಕ್ಕ ಕೆಲ ಪಯಿಚಿತ್‌ ಚಾವತೆ ಬದಕ್‌ವಕಾಯಿತ್‌ ನಂಗ ಪೊರ್‌ಟಿತ್‌ ಪೋಪ, ಎಳೆಯಂವೊನ ನಾಡ ಕೂಡೆ ಅಯಿಚಿತಾರಿ.

9 ನಾನ್‌ ಅಂವೊಂಗ್‌ ಜವಾಬ್ದಾರನಾಯಿತ್‌ಪ್ಪಿ. ಅಂವೊಂಡ ವಿಷಯತ್‌ ನನ್ನ ಕ್‍ೕಳಿ, ನಾನ್‌ ಅಂವೊನ ತಿರಿತ್‌ ಕಾಕಿಯಂಡ್‌ ಬಕ್ಕತೆ ಪೋಚೇಂಗಿ ಆ ಅಪರಾದ ಕಾಲಕಾಲಕು ನಾಡ ಮಂಡೆರ ಮೇಲೆ ಇರಡ್.

10 ನಂಗ ತಡಮಾಡತೆ ಇಂಜಿತುಂಡೇಂಗಿ, ಇಕ್ಕಣೆಕ್‌ ನಂಗ ದಂಡ್‌ ಕುರಿ ಅಲ್ಲಿಕ್‌ ಪೋಯಿತ್‌ ಬಪ್ಪಕಿಂಜತ್‍ೕಂದ್‌ ಎಣ್ಣ್‌ಚಿ.

11 ಅದ್‌ಂಗ್‌ ಅಯಿಂಗಡ ಅಪ್ಪನಾನ ಇಸ್ರಾಯೇಲ: ಅನ್ನನೆ ಆಚೇಂಗಿ, ನಿಂಗ ಒರ್‌ ಕೆಲಸ ಮಾಡಿ. ಈ ದೇಶತ್‌ಲ್‌ ಕ್‌ಟ್ಟ್‌ವ ಬೆಲೆಯುಳ್ಳ ವಸ್ತುಲ್‌ ಚೆನ್ನ ತೈಲ, ಚೆನ್ನ ತೇನ್, ಚೆನ್ನ ವಾಸಾನೆಯುಳ್ಳ ದ್ರವ್ಯ, ಒಣಗ್‌ನ ರಾಕ್ಷೆ ಪಣ್ಣ್, ಕಾಕಂಬಿ, ಹಾಲುಬಡ್ಡಿ, ಪಿಂಞ ಬಾದಾಮಿನ ಆ ಮನುಷ್ಯಂಗ್‌ ಇನಾಮಾಯಿತ್‌ ಎಡ್‌ತಂಡ್‌ ಪೊಯಿ.

12 ದಂಡ್‌ ಪಟ್ಟ್‌ ಪಣತ್‌ನ ಕೈಲ್‌ ಎಡ್‌ತಂಡ್‌ ಪೋಯಿ. ಚೀಲತ್‌ರ ಬಾಯಿಲ್‌ ಇಟ್ಟಿತ್‌ ತಿರಿತ್‌ ಅಯಿಚ ಪಣತ್‌ನ ಸಹ ಎಡ್‌ತಂಡ್‌ ಪೋಯಿ. ಒರ್‌ ಸಮಯ ಅಯಿಂಗ ಅರಿಯತೆ ನಿಂಗಡ ಚೀಲತ್‌ ಬೆಚ್ಚಿತಿಕ್ಕು

13 ನಿಂಗಡ ತಮ್ಮಣನ ಸಹ ಕಾಕಿಯಂಡ್‌ ಆ ಮನುಷ್ಯಂಡ ಪಕ್ಕ ಪುನಃ ಪೋಯಿ.

14 ಅಂವೊ ನಿಂಗಡ ಮೇಲೆ ಕನಿಕರ ಬೆಚ್ಚಿತ್‌ ಸಿಮೇಯೋನನ, ಪಿಂಞ ಬೆನ್ಯಾಮೀನನ ನಿಂಗಡ ಕೂಡೆ ತಿರಿತ್‌ ಅಯಿಪಕ್‌ ಸರ್ವಶಕ್ತನಾನ ದೇವ ನಿಂಗಕ್‌ ಕರುಣೆ ಕ್‌ಟ್ಟುವನೆಕೆ ಮಾಡಡ್. ನಾನ್‌ ನಾಡ ಮಕ್ಕಳ ಕಳ್‌ದಂಡುಂದ್‌ ಇಂಜತೇಂಗಿ, ಅದ್‌ ಅನ್ನನೆ ಆಡ್‍ೕಂದ್‌ ಎಣ್ಣ್‌ಚಿ.


ಯೋಸೇಫಂಡ ಅಣ್ಣತಮ್ಮಣಂಗ ಅಂವೊನ ಪುನಃ ಕಾಂಬದ್‌

15 ಅಕ್ಕ ಅಯಿಂಗ ಇನಾಮ್‌ನ ಪಿಂಞ ದಂಡ್‌ ಪಟ್ಟ್‌ ಪಣತ್‌ನ ಎಡ್‌ತಂಡ್‌ ಬೆನ್ಯಾಮೀನ್ನ ಅಯಿಂಗಡ ಕೂಡೆ ಕಾಕಿಯಂಡ್‌ ಐಗುಪ್ತ ದೇಶಕ್‌ ಪ್ರಯಾಣ ಮಾಡಿತ್, ಯೋಸೇಫಂಡ ಮಿಂಞತ್‌ ಬಂದಿತ್‌ ನಿಂದತ್.

16 ಬೆನ್ಯಾಮೀನ ಅಯಿಂಗಡ ಕೂಡೆ ಬಂದಿತುಳ್ಳದ್‌ನ ಯೋಸೇಫ ಕಂಡಿತ್, ತಾಂಡ ಮನೆರ ಕಾರ್ಯಕಾರನ ಕಾಕಿತ್: ಈಂಗಳ ಮನೆಕ್‌ ಕಾಕಿಯಂಡ್‌ ಪೋಯಿತ್, ಉಂಬಕ್‌ ಬೋಂಡಿಯಾನದ್‌ನ ಕೊಂದಿತ್‌ ನಲ್ಲ ಗದ್ದಾಳ ತಯಾರ್‌ ಮಾಡ್, ಇಂದ್‌ ಮಜ್ಜಣ ಈ ಜನ ನಾಡ ಕೂಡೆ ಉಂಬಾಂದ್‌ ಎಣ್ಣ್‌ಚಿ.

17 ಆ ಕಾರ್ಯಕಾರ ಯೋಸೇಫ ಎಣ್ಣ್‌ನನೆಕೆ ಮಾಡಿತ್‌ ಅಯಿಂಗಳ ಯೋಸೇಫಂಡ ಮನೇಕ್‌ ಕಾಕಿಯಂಡ್‌ ಪೋಚಿ.

18 ಅಯಿಂಗಳ ಯೋಸೇಫಂಡ ಮನೆಕ್‌ ಕಾಕಿಯಂಡ್‌ ಪೋಪದ್‌ನ ಕಂಡಿತ್‌ ಅಯಿಂಗಕ್‌ ಪೋಡಿ ಆಯಿತ್: ಮಿಂಞ ನಂಗಡ ಚೀಲತ್‌ಲ್‌ ತಿರಿತ್‌ ಅಯಿಚ ಪಣಕ್‌ ನಂಗಡ ಮೇಲೆ ಕುತ್ತ ಎಣ್ಣಿತ್, ನಂಗಳ ಪುಡ್‌ಚಂಡ್‌ ಬಂದಿತ್, ಸಮಯ ನೋಟಿತ್‌ ಇಕ್ಕ ನಂಗಡ ವಿರುದ್ದ ಬಂದಿತ್, ನಂಗಡ ಕತ್ತೆಯಳ ಎಡ್‌ತಂಡ್‌ ನಂಗಳ ಅಡಿಯಾಳಾಯಿತ್‌ ಮಾಡ್‌ವಕ್‌ ಇಕ್ಕ ಕಾಕಿಯಂಡ್‌ ಪೋಯಂಡುಂಡ್‍ೕಂದ್‌ ಎಣ್ಣ್‌ಚಿ.

19 ಆನಗುಂಡ್‌ ಅಯಿಂಗ ಯೋಸೇಫಂಡ ಮನೆರ ಪಡಿರ ಪಕ್ಕ ಬಪ್ಪಕ, ಯೋಸೇಫಂಡ ಕಾರ್ಯಕಾರಂಡ ಪಕ್ಕ ಬಂದಿತ್:

20 ಸ್ವಾಮಿ, ಮಿಂಞ ಒರ್‌ ಕುರಿ ನಂಗ ಇಲ್ಲಿಕ್‌ ಬಂದಿತ್‌ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ತಂಡ್‌ ಪೋಚಿ.

21 ನಂಗ ತಿರಿತ್‌ ಮನೆಕ್‌ ಪೋಪಕ, ಬಯಿಟ್ ಒಳಿಯುವ ಜಾಗತ್‌ಲ್‌ ಚೀಲತ್‌ನ ತೊರ್‌ಂದಿತ್‌ ನೋಟ್‌ವಕ ತೂಕ ಕಮ್ಮಿ ಆಕತೆ ನಂಗ ಆಹಾರ ದಾನ್ಯತ್‌ನ ಎಡ್‌ಪಕ್‌ ಕೊಡ್‌ತ ಪಣ ನಂಗಡನಂಗಡ ಚೀಲತ್‌ಲ್‌ ಉಳ್ಳದ್‌ ನಂಗಕ್‌ ಗೊತ್ತಾಚಿ. ಅದ್‌ನ ನಂಗ ಅದ್‌ನ ತಿರಿತ್‌ ಎಡ್‌ತಂಡ್‌ ಬಂದಿತುಂಡ್.

22 ಇಕ್ಕ ನಂಗ ಇಂಞು ಚೆನ್ನ ಆಹಾರ ದಾನ್ಯತ್‌ನ ಕ್ರಯಕ್‌ ಎಡ್‌ಪಕಾಯಿತ್‌ ಬೋರೆ ಪಣತ್‌ನ ಎಡ್‌ತಂಡ್‌ ಬಂದಿಯೆ. ನಂಗ ಮಿಂಞ ಕೊಡ್‌ತ ಪಣತ್‌ನ ದಾರ್‌ ಚೀಲಕ್‌ ಇಟ್ಟತ್‍ೕಂದ್‌ ನಂಗಕ್‌ ಗೊತ್ತ್‌ಲ್ಲೇಂದ್‌ ಎಣ್ಣ್‌ಚಿ.

23 ಅದ್‌ಂಗ್‌ ಆ ಕಾರ್ಯಕಾರ: ನಿಂಗ ಸಮಾದಾನತ್‌ಲ್‌ ಇರಿ. ನಿಂಗ ಬೊತ್ತತಿ. ನಿಂಗಡ ದೇವನಾಯಿತುಳ್ಳ ನಿಂಗಡ ಮುತ್ತಜ್ಜಂಗಡ ದೇವ ನಿಂಗಕ್‌ ಆ ಚೀಲತ್‌ಲ್‌ ಇಟ್ಟಿತಿಕ್ಕು. ನಿಂಗಡ ಪಣ ನಾಕ್‍ ಕ್‌ಟ್ಟ್‌ಚೀಂದ್‌ ಎಣ್ಣಿತ್, ಸಿಮೆಯೋನನ ಪೊರ್ಮೆ ಕಾಕಿಯಂಡ್‌ ಬಂತ್‌ ಅಯಿಂಗಡ ಪಕ್ಕ ಬುಟ್ಟತ್.

24 ಇಂಞು ಆ ಮನುಷ್ಯ ಅಯಿಂಗಳ ಯೋಸೇಫಂಡ ಮನೆರ ಒಳ್‌ಕ್‌ ಕಾಕಿಯಂಡ್‌ ಪೋಯಿತ್, ಅಯಿಂಗಕ್‌ ಕಾಲ್‌ ಕತ್ತ್‌ವಕ್‌ ನೀರ್‌ ಕೊಡ್‌ತಿತ್, ಅಯಿಂಗಡ ಕತ್ತೆಯಕ್‌ ಮೇಚಿನ ಇಟ್ಟತ್.

25 ಅಯಿಂಗ ಅಲ್ಲಿ ಉಂಬಾಂದ್‌ ಅಯಿಂಗಕ್‌ ಗೊತ್ತಾನಗುಂಡ್, ಮಜ್ಜಣ ಯೋಸೇಫ ಬಪ್ಪಕತ್ತನೆ ಇನಾಮ್‌ನ ಬೆಚ್ಚಂಡ್‌ ಅಂವೊಂಗಾಯಿತ್‌ ಪಾರಕಾತಂಡಿಂಜತ್.

26 ಯೋಸೇಫ ಮನೆಕ್‌ ಬಂದದು ಅಯಿಂಗ ಅಯಿಂಗಡ ಕೈಯಿಲ್‌ ಬೆಚ್ಚಂಡಿಂಜ ಇನಾಮ್‌ನ ಮನೆರ ಒಳ್‌ಕ್‌ ಎಡ್‌ತ ಬಂತ್, ಅಂವೊಂಗ್‌ ಕೊಡ್‌ತಿತ್, ಅಂವೊಂಡ ಮಿಂಞತ್‌ ಅಡ್ಡ ಬುದ್ದತ್.

27 ಅಕ್ಕ ಅಂವೊ ಅಯಿಂಗಳ ವಿಚಾರಿಚಿಟ್ಟಿತ್, ನಿಂಗ ಎಣ್ಣಿಯಂಡಿಂಜ ವಯಸ್ಸಾನ ನಿಂಗಡ ಅಪ್ಪ ಚಾಯಿತೆ ಉಂಡಾ? ಅಂವೊ ಇಂಞು ಬದ್‌ಕಿತುಂಡಾಂದ್‌ ಕ್‍ೕಟತ್.

28 ಅದ್‌ಂಗ್‌ ಅಯಿಂಗ: ಅಕ್ಕು, ನೀಡ ಸೇವಕನಾನ ನಂಗಡ ಅಪ್ಪ ಚಾಯಿತೆ ಉಂಡ್. ಅಂವೊ ಬದ್‌ಕಿತುಂಡ್‍ೕಂದ್‌ ಎಣ್ಣಿತ್, ಪುನಃ ಅಂವೊಂಗ್‌ ಅಡ್ಡ ಬುದ್ದತ್.

29 ಅಕ್ಕ ಅಂವೊ ಕಣ್ಣೆಡ್‌ತಿತ್‌ ತಾಂಡ ಅವ್ವ ಪೆತ್ತ ಮೋಂವೊನಾನ ಬೆನ್ಯಾಮೀನನ ನೋಟಿತ್: ನಿಂಗ ನಾಕ್‍ ಎಣ್ಣ್‌ನ ನಿಂಗಡ ಚೆರಿಯ ತಮ್ಮಣ ಇಂವೊನಾ? ನಾಡ ಮೋನೇ, ದೇವ ನೀಡ ಮೇಲೆ ಕನಿಕರ ಕಾಟಡ್‍ೕಂದ್‌ ಎಣ್ಣ್‌ಚಿ.

30 ಯೋಸೇಫಂಡ ಮನಸ್ಸ್‌ ಅಂವೊಂಡ ತಮ್ಮಣಂಗಾಯಿತ್‌ ಕೊದಿಚಾಂಗ್, ಅಂವೊ ಮೊರ್‌ಡ್‌ವಕ್‌ ಒರ್‌ ಜಾಗತ್‌ನ ತ್‍ೕಡಿಯಂಡ್‌ ಬೆರಿಯ ಕೋಂಬರೆಕ್‌ ಪೋಯಿತ್‌ ಅಲ್ಲಿ ಮೊರ್‌ಟತ್.

31 ಅಲ್ಲಿಂಜ ಅಂವೊ ತಾಂಡ ಮೂಡ್‌ನ ಕತ್ತಿಯಂಡ್‌ ಪೊರ್ಮೆ ಬಂದಿತ್, ದುಃಖತ್‌ನ ಮನಸ್ಸ್‌ಲ್‌ ಬೆಚ್ಚಂಡ್, ಉಂಬಕ್‌ ಎಡ್‌ತಂಡ್‌ ಬಾರೀಂದ್‌ ಎಣ್ಣ್‌ಚಿ.

32 ಐಗುಪ್ತ ದೇಶತ್‌ರ ಜನ ಇಬ್ರಿಯ ಜನತ್‌ರ ಕೂಡೆ ಉಂಬಯಿಂಜ್‌ತ್‌ಲ್ಲೆ. ಅನ್ನನೆ ಮಾಡ್‌ವದ್‌ ಅಯಿಂಗಕ್‌ ಅಸಹ್ಯವಾಯಿತ್‌ಪ್ಪ. ಆನಗುಂಡ್‌ ಅಯಿಂಗ ಯೋಸೇಫಂಗ್‌ ಬೋರೆಯಾಯಿತು, ಅಯಿಂಗಕ್‌ ಬೋರೆಯಾಯಿತು ಉಂಬಕ್‌ ಬೆಚ್ಚತ್.

33 ಅಂವೊಂಗ್‌ ಮಿಂಞತ್‌ ಬಲ್ಯಂವೊಡಿಂಜ ಚೆರಿಯಂವೊಕತ್ತನೆ ಅಯಿಂಗಯಿಂಗಡ ವಯಸ್ಸ್‌ಕ್ ಸೆರಿಯಾಯಿತ್‌ ಅಯಿಂಗಳ ಅಳ್‍ಪ್‍ಚಿಟ್ಟತ್. ಅದ್‌ಂಗ್‌ ಅಯಿಂಗ ಆಶ್ಚರ್ಯ ಪಟ್ಟತ್.

34 ಯೋಸೇಫ ಅಂವೊಂಡ ಮೇಜಿಲ್‌ ಬೆಚ್ಚಿತ್‌ಂಜ ಆಹಾರತ್‌ಂಜ ಚೆನ್ನ ಆಹಾರತ್‌ನ ಒಬ್ಬೊಬ್ಬಂಗು ಅಯಿಚತ್. ಆಚೇಂಗಿ ಬೆನ್ಯಾಮೀನಂಗ್‌ ಅಂಜ್ ಪಟ್ಟ್‌ ಜಾಸ್ತಿ ಇಂಜತ್. ಅಯಿಂಗ ಎಲ್ಲಾರು ಅಂವೊಂಡ ಕೂಡೆ ಉಂಡಿತ್‌ ಕುಡ್‌ಚಿತ್‌ ಕುಶೀಲ್‌ ಇಂಜತ್.

© 2017, New Life Literature (NLL)

Lean sinn:



Sanasan