Biblia Todo Logo
Bìoball air-loidhne

- Sanasan -


ಆದ್ಯತ್‌ರ ಪುಸ್ತಕ 28 - ಕೊಡವ ಬೈಬಲ್

1 ಅಕ್ಕ ಇಸಾಕ ಯಾಕೋಬನ ಕಾಕಿತ್‌ ಅಂವೊನ ಆಶೀರ್ವಾದ ಮಾಡಿತ್: ನೀನ್‌ ಕಾನಾನಿಯರಡ ಮೂಡಿಯಳ ಮಂಗಲ ಕಯಿಪಕ್ಕಾಗ.

2 ನೀನ್‌ ಪೊರ್‌ಟಿತ್‌ ಪದ್ದನ್‌ ಆರಾಮ್‌ ದೇಶತ್‌ಲ್‌ ಉಳ್ಳ ನೀಡ ಅವ್ವಂಡ ಅಪ್ಪನಾನ ಬೆತೂವೇಲಂಡ ಮನೆಕ್‌ ಪೋಯಿತ್, ಅಲ್ಲಿ ನೀಡ ಅವ್ವಂಡ ಅಣ್ಣನಾನ ಲಾಬಾನಂಡ ಮೂಡಿ ಮಕ್ಕಡತ್‌ಲ್‌ ಒಬ್ಬಳ ಮಂಗಲ ಕಯಿಚಾಂದ್‌ ಅಪ್ಪಣೆ ಕೊಡ್‌ತತ್,

3 ಸರ್ವಶಕ್ತತನಾನ ದೇವ ನಿನ್ನ ಆಶೀರ್ವಾದ ಮಾಡಿತ್, ನೀಕ್‌ ದುಂಬ ಸಂತಾನ ಕೊಡ್‌ತಿತ್, ನೀಡಗೊಂಡ್‌ ದುಂಬ ಜನಾಂಗ ಪುಟ್ಟಚ್.

4 ದೇವ ಅಬ್ರಹಾಮಂಗ್‌ ಕೊಡ್‌ತ ಆಶೀರ್ವಾದತ್‌ನ ಪಿಂಞ ನೀನ್‌ ಪರದೇಶಿಯಾಯಿತ್‌ ಉಳ್ಳ ಈ ಜಾಗತ್‌ನ ನೀನ್‌ ಸ್ವಂತವಾಯಿತ್‌ ಪಡೆಯುವಕ್‌ ಅಬ್ರಹಾಮಂಗ್‌ ವಾಗ್ದಾನ ಮಾಡಿತ್‌ ಕೊಡ್‌ತ ಆಶೀರ್ವಾದತ್‌ನ ನೀಕು ನೀಡ ಸಂತಾನಕು ತರಡ್‍ೕಂದ್‌ ಎಣ್ಣಿತ್‌ ಆಶೀರ್ವಾದ ಮಾಡ್‌ಚಿ.

5 ಅಲ್ಲಿಂಜ ಇಸಾಕ ಯಾಕೋಬನ ಅಯಿಚತ್. ಅಂವೊ ಪದ್ದನ್‌ ಅರಾಮ್‌ಲ್‌ ಉಳ್ಳ ತಾಂಗು ತಾಂಡ ಅಣ್ಣನಾನ ಏಸಾಂಗು ಅವ್ವಳಾನ ರೆಬೆಕ್ಕಂಡ ಅಣ್ಣನಾಯಿತುಳ್ಳ ಅರಾಮ್ಯ ದೇಶಕ್‌ ಕೂಡ್‌ವಂವೊನಾನ ಬೆತೂವೇಲಂಡ ಮೋಂವೊನಾಯಿತ್‌ಂಜ ಲಾಬಾನಂಡ ಪಕ್ಕ ಪೋಚಿ.

6 ಇಸಾಕ ಯಾಕೋಬನ ಆಶೀರ್ವಾದ ಮಾಡಿತ್‌ ಪದ್ದನ್‌ ಅರಾಮ್‌ಲ್‌ ಒರ್‌ ಮೂಡಿನ ಮಂಗಲ ಕಯಿಪ್ಪಕಾಯಿತ್‌ ಆಯಿಚಿತ್‍ೕಂದು, ಅಂವೊ ಯಾಕೋಬಂಗ್‌ ಆಶೀರ್ವಾದ ಮಾಡಿತ್: ನೀನ್‌ ಕಾನಾನ್ಯರಯಿಂಗಡ ಮೂಡಿಯಳ ಮಂಗಲ ಕಯಿಪಕ್ಕಾಗಾಂದ್‌ ಅಪ್ಪಣೆ ಕೊಡ್‌ತದು,

7 ಯಾಕೋಬ ತಾಂಡ ಅಪ್ಪವ್ವಂಡ ತಕ್ಕ್‌ನ ಕ್‍ೕಟಿತ್‌ ಪದ್ದನ್‌ ಆರಾಮ್‌ಕ್‌ ಪೋಚೀಂದು ಏಸಾವಂಗ್‌ ಗೊತ್ತಾಚಿ.

8 ತಾಂಡ ಅಪ್ಪನಾನ ಇಸಾಕಂಗ್‌ ಕಾನಾನ್ಯ ಪೊಣ್ಣಾಳ್‌ವಳ ಮಂಗಲ ಕಯಿಪದ್‌ ಚೆನ್ನಂಗು ಕುಶಿ ಇಲ್ಲೇಂದ್‌ ಏಸಾವಂಗ್‌ ಗೊತ್ತಾನಗುಂಡ್,

9 ಏಸಾವ, ತಾಂಗ್‌ ಮಂಗಲ ಆಯಿತ್‌ ಪೊಣ್ಣಾಳ್‌ವ ಇಂಜತೇಂಗಿಯು, ಪುನಃ ಅಬ್ರಹಾಮಂಡ ಮೋಂವೊನಾನ ಇಷ್ಮಾಯೇಲಂಡ ಮೋವಳು ನೆಬಾಯೋತಂಡ ತಂಗೆಯು ಆನ ಮಹಲತಳ ಸಹ ಮಂಗಲ ಕಯಿಚತ್.


ಬೇತೇಲ್‌ಲ್‌ ಯಾಕೋಬಂಡ ಸ್ವಪ್ನ

10 ಯಾಕೋಬ ಹಾರಾನ್‌ಕ್‌ ಪೋಂಡೂಂದ್‌ ಬೇರ್ಷೆಬಯಿಂಜ ಪೊರ್‌ಟತ್.

11 ಒರ್‌ ಜಾಗಕ್‌ ಬಪ್ಪಕ, ಸೂರ್ಯ ಮುಳ್‌ಗಿತ್‌ಂಜನಗುಂಡ್, ಬಯಿಟ್ ಕಳೆಯುವೊಕ್‌ ಅಲ್ಲಿಯೇ ಒಳ್‌ಂಜತ್. ಒರ್‌ ಕಲ್ಲ್‌ನ ಮಂಡೆಕ್‌ ದಿಂಬಾಯಿತ್‌ ಬೆಚ್ಚಂಡ್, ಬುದ್ದಂಡತ್.

12 ಅಂವೊ ಅಲ್ಲಿ ವರಿಯಂಡಿಪ್ಪಕ, ಒರ್‌ ಸ್ವಪ್ನ ಕಂಡತ್. ಆ ಸ್ವಪ್ನತ್‌ಲ್‌ ಬೂಮಿಯಿಂಜ ಸ್ವರ್‌ಗಕ್‌ ಮುಟ್ಟ್‌ವನೆಕೆ ಒರ್‌ ಮೊಟ್ಟ್‌ನ ಕಂಡತ್. ಅದ್‌ಲ್‌ ದೇವದೂತಂಗ ಕೊಡಿಕು ಅಡಿಕು ಪೋಪದ್‌ ಬಪ್ಪದ್‌ನ ಕಂಡತ್.

13 ಅದಾ, ಯೆಹೋವ ಮೊಟ್ಟ್‌ರ ಕೊಡಿಲ್‌ ನಿಂದಿತ್: ನಾನ್‌ ನೀಡ ಮುತ್ತಜ್ಜಂಗಳಾನ ಅಬ್ರಹಾಮಂಡ ದೇವನು ಇಸಾಕಂಡ ದೇವನು ಆನ ಯೆಹೋವ; ನೀನ್‌ ಬುದ್ದಂಡುಳ್ಳ ಬೂಮಿನ ನೀಕು ನೀಡ ಸಂತಾನಕು ತಪ್ಪಿ.

14 ನೀಡ ಸಂತಾನ ಲೆಕ್ಕ ಮಾಡ್‌ವಕಯ್ಯತನೆಕೆ ಈ ಬೂಮಿರ ದೂಳ್‌ರಚ್ಚಕ್‌ ಇಪ್ಪ. ನೀನ್‌ ಪಡ್‌ಞಾರ್, ಕ್‍ೕಕ್, ಬಡಕ್‌ ತೆಕ್ಕ್‌ ದಿಕ್ಕ್‌ಲ್‌ ಪಬ್ಬ್‌ವಿಯ. ನೀಡಯಿಂಜಲು ನೀಡ ಸಂತಾನತ್‌ಂಜಲು ಬೂಮಿರ ಎಲ್ಲಾ ಕುಲತ್‌ರ ಜನ ಆಶೀರ್ವಾದ ಪೊಂದ್ವ.

15 ನಾನ್‌ ನೀಡ ಕೂಡೆ ಇಂಜಿತ್, ನೀನ್‌ ಪೋಪ ಜಾಗತ್‌ಲೆಲ್ಲ ನಾನ್‌ ನಿನ್ನ ಕಾಪಾಡಿತ್, ನಿನ್ನ ಈ ದೇಶಕ್‌ ಪುನಃ ತಿರಿತ್‌ ಕೊಂಡ ಬಪ್ಪಿ. ನಾನ್‌ ನೀಕ್‌ ವಾಗ್ದಾನ ಮಾಡ್‌ನದೆಲ್ಲ ನೆರವೇರಿಚಿಡುವಕತ್ತನೆ ನಿನ್ನ ನಾನ್‌ ಕೈ ಬುಡೆಲೇಂದ್‌ ಎಣ್ಣ್‌ಚಿ.

16 ಯಾಕೋಬ ವರ್‌ಕ್‌ಯಿಂಜ ಏವಕ: ನೇರಾಯಿತು ಯೆಹೋವ ಈ ಜಾಗತ್‌ಲ್‌ ಉಂಡ್. ಇದ್‌ ನಾಕ್‍ ಗೊತ್ತಾಯಿತ್‌ಲ್ಲೆಂದ್‌ ಎಣ್ಣ್‌ಚಿ;

17 ಅಕ್ಕ, ಅಂವೊಂಗ್‌ ಪೋಡಿಯಾಯಿತ್: ಎಂತ ಒರ್‌ ಬಯಂಗರವಾನ ಜಾಗ ಇದ್‌! ಇದ್‌ ನೇರಾಯಿತು ದೇವಡ ಮನೆ ಅಲ್ಲತೆ ಬೋರೆ ಏದು ಇಲ್ಲೆ. ಇದ್‌ ಸ್ವರ್‌ಗಕ್‌ ಉಳ್ಳ ಪಡೀಂದ್‌ ಎಣ್ಣ್‌ಚಿ.

18 ಯಾಕೋಬ ಪೊಲಾಕ ನೇರ್ತೆ ಎದ್ದಿತ್‌ ತಾಂಡ ಮಂಡೆಕ್‌ ಬೆಚ್ಚಿತ್‌ಂಜ ಕಲ್ಲ್‌ನ ಎಡ್‌ತಿತ್, ಅದ್‌ನ ಕಂಬವಾಯಿತ್‌ ನಿಪ್ಪ್‌ಚಿಟ್ಟಿತ್‌ ಅದ್‌ಂಡ ಮೇಲೆ ಎಣ್ಣೆ ಬೂಕಿತ್,

19 ಆ ಜಾಗಕ್‌ ಬೇತೇಲ್‌ಂದ್‌ ಪೆದಬೆಚ್ಚತ್. ಇದ್‌ಂಗ್‌ ಮಿಂಞ ಆ ಊರ್‌ಕ್‌ ಲೂಜ್ ಎಣ್ಣುವ ಪೆದ ಇಂಜತ್.

20 ಅಲ್ಲಿಂಜ ಯಾಕೋಬ: ದೇವ ನಾಡ ಕೂಡೆ ಇಂಜಿತ್, ನಾನ್‌ ಪೋಪ ಬಟ್ಟೆಲ್‌ ನನ್ನ ಕಾಪಾಡಿತ್, ಉಂಬಕ್‌ ಕೂಳ್, ಉಡ್‌ಪಕ್‌ ಬಟ್ಟೆ ತಂದಿತ್,

21 ನನ್ನ ನಾಡ ಅಪ್ಪಂಡ ಮನೆಕ್‌ ಸಮಾದಾನಾತ್‌ಲ್‌ ತಿರಿತ್‌ ಬಪ್ಪಕ್‌ ಮಾಡ್‌ಚೇಂಗಿ, ಯೆಹೋವ ನಾಕ್‍ ದೇವನಾಯಿತ್‌ಪ್ಪ.

22 ನಾನ್‌ ಕಂಬವಾಯಿತ್‌ ನಟ್ಟಿತುಳ್ಳ ಈ ಕಲ್‌ಲ್‌ ದೇವಡ ಮನೆಯಾಯಿತ್‌ಪ್ಪ. ದೇವ ನಾಕ್‍ ಏದೆಲ್ಲಾ ತಪ್ಪ ಅದ್‌ಲ್‌ ಪತ್ತ್‌ಲ್‌ ಒರ್‌ ಬಾಗತ್‌ನ ತಪ್ಪೀಂದ್‌ ಎಣ್ಣಿತ್‌ ಆಣೆ ಮಾಡ್‌ಚಿ.

© 2017, New Life Literature (NLL)

Lean sinn:



Sanasan