Biblia Todo Logo
Bìoball air-loidhne

- Sanasan -

ಎಸ್ತೆರ್‌ 5 - ಕೊಡವ ಬೈಬಲ್

1 ಪಟ್ಟಣಿ ನಿಂದ ಮೂಂದನೆ ದಿವಸತ್‌ ಎಸ್ತೇರ್‌ ರಾಣಿರ ಬಟ್ಟೆ ಇಟ್ಟಂಡ್, ಅರಮನೆರ ಬಲ್ಯ ಕೋಂಬರೆರ ಒಳ್‌ಕ್‌ ಪೋಯಿತ್, ರಾಜಂಡ ಬಾಡೆರ ಮಿಂಞತ್‌ ಪೋಯಿತ್‌ ನಿಂದತ್. ಅಕ್ಕ ರಾಜ, ಬಾಡೆಲ್‌ ಅಂವೊಂಡ ಸಿಂಹಾಸನತ್‌ ಪಡಿರ ಮಿಂಞತ್‌ ಅಳ್‌ತಂಡಿಂಜತ್.

2 ಎಸ್ತೇರ್‌ ರಾಣಿ ಅರಮನೆರ ಬಲ್ಯ ಕೋಂಬರೆರ ಒಳ್‌ಕ್‌ ನಿಂದಂಡಿಪ್ಪದ್‌ನ ರಾಜ ಕಾಂಬಕ, ಎಸ್ತೇರ್‌ ರಾಣಿಕ್‌ ಅಂವೊಂಡ ದಯೆ ಕ್‌ಟ್ಟ್‌ಚಿ. ಆನಗುಂಡ್‌ ರಾಜ ತಾಂಡ ಕೈಯಿಲ್‌ ಇಂಜ ಪೊನ್ನ್‌ರ ಕೋಲ್‌ನ ಅವಡ ಬರಿಕ್‌ ಕಾಟ್‌ಚಿ. ಅಕ್ಕ ಎಸ್ತೇರ್‌ ಪಕ್ಕ ಬಂದಿತ್‌ ಆ ಪೊನ್ನರ ಕೋಲ್‌ ತುದಿನ ಮುಟ್ಟ್‌ಚಿ.

3 ಅಕ್ಕ ರಾಜ ಅವಳ ನೋಟಿತ್: ಎಸ್ತೇರ್‌ ರಾಣಿಯೇ, ನೀಕ್‌ ಎಂತ ಬೋಂಡೂ? ನೀಡ ಬೋಡಿಕೆ ಎಂತ? ನೀನ್‌ ಈ ರಾಜ್ಯತ್‌ರ ಪಾದಿ ಬಾಗತ್‌ನ ಕ್‍ೕಟತೇಂಗಯು, ಅದ್‌ ನೀಕ್‌ ಕ್‌ಟ್ಟ್‌ವಾಂದ್‌ ಎಣ್ಣ್‌ಚಿ.

4 ಅದ್‌ಂಗ್‌ ಎಸ್ತೇರ್: ರಾಜಂಗ್‌ ಕುಶಿ ಉಂಡೇಂಗಿ, ನಾನ್‌ ತಾಂಗಾಯಿತ್‌ ತಯಾರ್‌ ಮಾಡಿತುಳ್ಳ ಗದ್ದಾಳಕ್‌ ಇಂದ್‌ ರಾಜನು ಹಾಮಾನನು ಬರಂಡೂಂದ್‌ ಎಣ್ಣ್‌ಚಿ.

5 ಅಕ್ಕ ರಾಜ: ಹಾಮಾನನ ಬೆರಿಯ ಕಾಕಿಯಂಡ್‌ ಬಾರಿ, ಎಸ್ತೇರ್‌ ಕುಶಿ ಪಟ್ಟನೆಕೆ ಮಾಡನಾಂದ್‌ ಎಣ್ಣ್‌ಚಿ. ಅಲ್ಲಿಂಜ ರಾಜ ಪಿಂಞ ಹಾಮಾನ ಎಸ್ತೇರ್‌ ತಯಾರ್‌ ಮಾಡ್‌ನ ಗದ್ದಾಳಕ್‌ ಪೋಚಿ.

6 ಗದ್ದಾಳ್‌ತ್‌ ದ್ರಾಕ್ಷಿರಸ ಬಳಂಬ್‌ವಕ, ರಾಜ ಪುನಃ ಎಸ್ತೇರ್‌ನ ನೋಟಿತ್: ನೀಡ ಬೋಡಿಕೆ ಎಂತಾಂದ್‌ ಎಣ್ಣ್? ಅದ್‌ನ ನೆರವೇರಿಚಿಡುವಿ. ನೀನ್‌ ರಾಜ್ಯತ್‌ರ ಪಾದಿ ಬಾಗತ್‌ನ ಕ್‍ೕಟತೇಂಗಿಯು ಸೆರಿ ಅದ್‌ನ ನಾನ್‌ ತಪ್ಪೀಂದ್‌ ಎಣ್ಣ್‌ಚಿ.

7 ಅದ್‌ಂಗ್‌ ಎಸ್ತೇರ್:

8 ನಾಕ್‍ ನಿಂಗಡ ದಯೆ ಕ್‍ಟ್ಟಿತ್, ನಾಡ ಬೋಡಿಕೆನ ತಪ್ಪಕು ನಾಡ ಮೊರೇನ ನೆರೆವೀರಿಚಿಡಂಡೂಂದ್‌ ನಿಂಗಕ್‌ ಕುಶಿ ಉಂಡೇಂಗಿ, ನಾನ್‌ ನಾಳೆ ನಿಂಗಕಾಯಿತ್‌ ತಯಾರ್‌ ಮಾಡುವ ಗದ್ದಾಳಕ್‌ ನಿಂಗ ಹಾಮಾನನ ಕೂಟಿಯಂಡ್‌ ಬರೊಂಡು. ಅಕ್ಕ ನಾನ್‌ ನಾಡ ಬೋಡಿಕೆನ, ಮೊರೇನ ಎಣ್ಣ್‌ವೀಂದ್‌ ಉತ್ತರ ಕೊಡ್‌ತತ್.


ಮೊರ್ದೆಕೈಯಂಡ ಮೇಲೆ ಹಾಮಾನಂಗ್‌ ಬಲ್ಯ ಚೆಡಿ

9 ಆ ದಿವಸ ಹಾಮಾನ ದುಂಬ ಕುಶೀಲ್‌ ತಾಂಡ ಮನೆಕ್‌ ಪೋಯಂಡಿಂಜತ್. ಆಚೇಂಗಿ ರಾಜಂಡ ಅರಮನೆರ ಪಡಿಲ್‌ ಅಳ್‌ತಿತ್‌ ಉಳ್ಳ ಮೊರ್ದೆಕೈ ತಾಂಡ ಮಿಂಞತ್‌ ಏವೊತೆ ತಾಂಗ್‌ ಪೋಡಿಚಿಡತೆ ಇಪ್ಪದ್‌ನ ಕಂಡಿತ್, ಹಾಮಾನಂಗ್‌ ಅಂವೊಂಡ ಮೇಲೆ ದುಂಬ ಚೆಡಿ ಆಚಿ.

10 ಆಚೇಂಗಿಯೂ ಹಾಮಾನ ತಾಂಡ ಚೆಡಿನ ಅಡಕಿಯಂಡ್‌ ಮನೆಕ್‌ ಬಂದಿತ್‌ ತಾಂಡ ಸ್ನೇಹಿತಂಗಳ, ತಾಂಡ ಪೊಣ್ಣ್‌ ಜೆರೆಷಳ ಕಾಕ್‌ಚಿ.

11 ಹಾಮಾನ ಅಯಿಂಗಡ ಮಿಂಞತ್‌ ಅಂವೊಂಡ ಐಶ್ವರ್ಯತ್‌ರ ವಿಷಯತ್, ಅಂವೊಂಗ್‌ ಉಳ್ಳ ಅನೇಕ ಕ್‌ಣ್ಣ ಮಕ್ಕಡ ವಿಷಯತ್, ರಾಜ ಅಂವೊನ ಗೌರವ ಪಡ್‌ತ್‌ನ ವಿಷಯತ್‌ ಪಿಂಞ ರಾಜ ಎನ್ನನೆ ಅಂವೊಂಗ್‌ ಎಲ್ಲಾ ಪ್ರಬುವಯಿಂಗ ಪಿಂಞ ಸೇವಕಂಗಕಿಂಜ ಬಲ್ಯ ಸ್ಥಾನತ್‌ನ ಕೊಡ್‌ತ ವಿಷಯತ್‌ ಎಣ್ಣಿತ್‌ ವಿವರಿಚಿಟ್ಟಂಡಿಂಜತ್‌ ಎಣ್ಣ್‌ಚಿ.

12 ಅದ್‌ ಮಾತ್‌ರ ಅಲ್ಲತೆ ಎಸ್ತೇರ್‌ ರಾಣಿ ಸಹ, ಅವ ತಯಾರ್‌ ಮಾಡ್‌ನ ಗದ್ದಾಳಕ್‌ ರಾಜಂಡ ನನ್ನ ಬುಟ್ಟಿತ್‌ ಕೂಡೆ ಬೋರೆ ದಾರ್‌ನೂ ಕಾಕಿತ್‌ಲ್ಲೆ. ನಾಳೆಯೂ ರಾಜಂಡ ಕೂಡೆ ಬರಂಡೂಂದ್‌ ನಾಕ್‍ ಎಣ್ಣಿತ್‍ೕಂದ್‌ ಎಣ್ಣ್‌ಚಿ.

13 ಆಚೇಂಗಿಯು ಯೆಹೂದ್ಯನಾನ ಮೊರ್ದೆಕೈ ಅರಮನೆರ ಪಡಿರ ಮಿಂಞತ್‌ಲ್‌ ಅಳ್‌ತಿತ್‌ಪ್ಪನ ನಾನ್‌ ಕಾಂಬಕ ಇದೆಲ್ಲಾ ನಾಕ್‍ ಒಂದು ಇಲ್ಲೆಂದ್‌ ಎಣ್ಣ್‌ಚಿ.

14 ಅಕ್ಕ ಅಂವೊಂಡ ಪೊಣ್ಣ್‌ ಆನ ಜೆರೆಷ ಪಿಂಞ ಅಂವೊಂಡ ಸ್ನೇಹಿತಂಗೆಲ್ಲಾ ಅಂವೊನ ನೋಟಿತ್: ಐಂಬದ್‌ ಮೊಳತ್‌ರಚ್ಚಕ್‌ ಎತ್ತರವಾನ ಒರ್‌ ತೂಕ್‌ಮರ ಮಾಡ್‌ಚಿಡ್. ಅದ್‌ನ ತಯಾರ್‌ ಮಾಡ್‌ನಪಿಂಞ ನಾಳೆ ಪೊಲಾಕ ರಾಜಂಡ ಅಪ್ಪಣೆನ ಎಡ್‌ತಂಡ್‌ ಮೊರ್ದೆಕೈನ ಅದ್‌ಲ್‌ ನೇತ್. ಅಲ್ಲಿಂಜ ನೀನ್‌ ಕುಶೀಲ್‌ ರಾಜಂಡ ಕೂಡೆ ಗದ್ದಾಳಕ್‌ ಪೋಲೂಂದ್‌ ಎಣ್ಣ್‌ಚಿ. ಹಾಮಾನನು ಈ ತಕ್ಕ್‌ನ ಕ್‍ೕಟಿತ್‌ ಕುಶಿಯಾಯಿತ್‌ ತೂಕ್‌ಮರತ್‌ನ ತಯಾರ್‌ ಮಾಡ್‌ಚಿ.

© 2017, New Life Literature (NLL)

Lean sinn:



Sanasan